ಕುಂಬಳೆ: ಗೃಹಪ್ರವೇಶಕ್ಕೆ ಆಗಮಿಸಿದ್ದ ಹನ್ನೊಂದರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಅನುದನಿತ ಶಾಲೆಯೊಂದರ ಮುಖ್ಯ ಶಿಕ್ಷಕ, ಕಣ್ಣೂರು ಬ್ಲಾತ್ತೂರ್ ನಿವಾಸಿ ಸುಧೀರ್(48)ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದು, ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
ದಿವಸಗಳ ಹಿಂದೆ ಸೀತಾಂಗೋಳಿ ಸನಿಹ ನಡೆದ ಗೃಹಪ್ರವೇಶ ಸಮಾರಂಭದಲ್ಲಿ ಈತ ಕಿರುಕುಳಕ್ಕೆ ಯತ್ನಿಸಿದ್ದನು. ಒಂದರಿಂದ ಮೂರನೇ ತರಗತಿ ವರೆಗೆ ಬಾಲಕಿಗೆ ಸುಧೀರ್ ಪಾಠ ಮಾಡಿದ್ದು, ಈ ಪರಿಚಯದಲ್ಲಿ ಗೃಹಪ್ರವೇಶ ಸಂದರ್ಭ ಮಾತನಾಡಿಸಿದ ಈ ಶಿಕ್ಷಕ, ಆಕೆಯನ್ನು ಸನಿಹದ ಪ್ರದೇಶಕ್ಕೆ ಕರೆದೊಯ್ದು ಕಿರುಕುಳಕ್ಕೆ ಯನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಾಲಕಿಯಿಂದ ಹೇಳಿಕೆದಾಖಲಿಸಿಕೊಳ್ಳಳು ಪೊಲಿಸರು ತಿರ್ಮಾನಿಸಿದ್ದಾರೆ.

