ಸಮರಸ ಚಿತ್ರಸುದ್ದಿ: ಕಾಸರಗೋಡು: ಶ್ರೀ ಧರ್ಮ ಶಾಸ್ತಾ ಸೇವಾ ಸಂಘದ ಈ ವರ್ಷದ ಶಬರಿಮಲೆ ಯಾತ್ರೆಯ ಮುದ್ರಾಧಾರಣೆ ಸೋಮವಾರ ಕಾಸರಗೋಡು ಶ್ರೀ ಅಯ್ಯಪ್ಪ ಮಂದಿರದಲ್ಲಿ ಬಾಲಕೃಷ್ಣ ಗುರುಸ್ವಾಮಿ ನೇತೃಥ್ವದಲ್ಲಿ ನಡೆಯಿತು. ಕಾರ್ಯಾಧ್ಯಕ್ಷ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಸರೇಶ್ ಸುವರ್ಣ, ಕಾರ್ಯದರ್ಶಿ ಧನಂಜಯ ಮಾನ್ಯ, ಮಹೇಶ್ ನೆಲ್ಲಿಕುಂಜೆ ಹಾಗೂ ಅಯ್ಯಪ್ಪ ಭಕ್ತರು ಉಪಸ್ಥಿತರಿದ್ದರು.





