ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಅಧ್ಯಯನ ಶಿಬಿರ ಆಯೋಜಿಸಲಾಗಿತ್ತು. ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ ಕ್ಯಾಂಪಸ್‍ನಲ್ಲಿ ಹೊಸ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಯಿತು. ಕೇಂದ್ರೀಯ ವಿಶ್ವ ವಿದ್ಯಾಲಯ ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಸಮಾರಂಭ ಉದ್ಘಾಟಿಸಿದರು. ಪೆÇ್ರ. ಸುಧಾ ಕಪ್ಪಳ್ಳಿ,ಪೆÇ್ರ. ಸಜಿ ಟಿ.ಜಿ. ಮತ್ತು ಪೆÇ್ರ. ಎ. ಶಕ್ತಿವೇಲ್, ಪೆÇ್ರ.ಎಂ.ಎನ್. ಮಹಮ್ಮದುನ್ನಿ ಇಲಿಯಾಸ್ ಮುಸ್ತಫಾ, ಡಾ.ಎಸ್.ಅನ್ಬಳಗಿ, ಡಾ.ಪಿ.ಶ್ರೀಕುಮಾರ್, ಡಾ.ಟಿ.ಜೆ. ಜೋಸೆಫ್, ಡಾ.ವೆಲ್ಲಿಕ್ಕೀಲ್ ರಾಘವನ್, ಪೆÇ್ರ.ಅರುಣ್ ಕುಮಾರ್, ಡಾ.ಕೆ.ಶ್ರವಣ, ಡಾ.ಅಲಿ ಅಕ್ಬರ್, ಡಾ.ಬಿ.ಎಸ್. ಆಶಾಲಕ್ಷ್ಮಿ, ಡಾ. ವಿ. ಆದಿತ್ಯ, ಡಾ. ಜ್ಞಾನವೇಲ್ ಸೌಂದರರಾಜನ್, ಮತ್ತು ಡಾ. ಮನೋಹರ್ ನಾಯಕ್ ಎಸ್ ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಕಾರ್ಯವೈಖರಿ, ಕೋರ್ಸ್‍ಗಳು, ಅವಕಾಶಗಳು, ಸೌಲಭ್ಯಗಳು,ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಸಮಿತಿಗಳ ಕಾರ್ಯವೈಖರಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಃಇತಿ ನಿಡಲಾಯಿತು. ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾದ ಬಿಎಸ್ಸಿ (ಆನರ್ಸ್) ಬಯಾಲಜಿ, ಬಿಕಾಂ (ಆನರ್ಸ್) ಫೈನಾನ್ಷಿಯಲ್ ಅನಾಲಿಟಿಕ್ಸ್ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ ಸ್ವಾಗತಿಸಿದರು. ಅಕಾಡೆಮಿಕ್ ವಿಭಾಗದ ಡೀನ್ ಪೆÇ್ರ. ಜೋಸೆಫ್ ಕೊಯಿಪಲ್ಲಿ ವಂದಿಸಿದರು.


