ಕಾಸರಗೋಡು: ಗ್ರೀನ್ ಪಾರ್ಕ್ ಇಕೋ ಬ್ಯಾಂಕ್ ಜಿಲ್ಲಾ ಮಟ್ಟದ ವಿಂಗಡಣೆ ಮತ್ತು ಗಾಜಿನ ತ್ಯಾಜ್ಯ ವಿಂಗಡಣೆ ಸೌಲಭ್ಯದ ಉದ್ಘಾಟನೆ 4ರಂದು ಬೆಳಗ್ಗೆ 9.30ಕ್ಕೆ ಸ್ಥಳೀಯಾಡಳಿತ, ಅಬಕಾರಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಂ.ಬಿ. ರಾಜೇಶ್ ಅನಂತಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ವಹಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉಣ್ಣಿತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಉದ್ಘಾಟನಾ ಸಮಾರಂಭದಲ್ಲಿ ಕಂಪನಿಯ ಷೇರುದಾರರಾದ ಸ್ಥಳೀಯ ಸಂಸ್ಥೆಗಳಿಗೆ ಲಾಭದ ವಿತರಣೆ ಮತ್ತು ಅತ್ಯುತ್ತಮ ಹಸಿರು ಕ್ರಿಯಾಸೇನೆ ಒಕ್ಕೂಟಗಳು, ಏಜೆನ್ಸಿಗಳು ಮತ್ತು ಸಸ್ಯ ತಯಾರಕರನ್ನು ಗೌರವಿಸುವ ಕಾರ್ಯಕ್ರಮ ನಡೆಯುವುದು.
ರೀಬಿಲ್ಡ್ ಕೇರಳದಿಂದ 3.82 ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ಅನಂತಪುರದಲ್ಲಿ 9790 ಚದರ ಅಡಿ ವಿಸ್ತೀರ್ಣದ ತ್ಯಾಜ್ಯ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಹಸಿರು ಕ್ರಿಯಾ ಸೇನೆಯು ವಿಂಗಡಿಸದ ತ್ಯಾಜ್ಯವನ್ನು ಸಂಗ್ರಹಿಸಿ ಗ್ರೀನ್ ಪಾರ್ಕ್‍ಗೆ ತಲುಪಿಸಲಾಗುವುದು. ಅಲ್ಲಿ ಅದನ್ನು ವಿಂಗಡಿಸಿ ಮರುಬಳಕೆಗಾಗಿ ಗ್ರೀನ್ ಪಾರ್ಕ್ ಹಸ್ತಾಂತರಿಸಲಾಗುತ್ತದೆ. ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯೊಂದಿಗೆ ಕ್ಲೀನ್ ಕೇರಳ ಕಂಪೆನಿ ಕಾರ್ಯನಿರ್ವಹಿಸುತ್ತಿದೆ.

