ಕಾಸರಗೋಡು: ಮೀಪುಗುರಿ ಕನ್ನಡ ಗ್ರಾಮದಲ್ಲಿ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60 ನೇ ಜನ್ಮದಿನಾಚರಣೆಯು ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಕಲಾವಿದರಿಂದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮವು ನಡೆಯಿತು.
ಸಂಸ್ಥೆಯ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಮತ್ತು ಉಪಾಧ್ಯಕ್ಷ ವಿರಾಜ್ ಅಡೂರು ಅವರಿಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವರ್ಷಾ ಶೆಟ್ಟಿ, ಶೈಲಜಾ ಹೊಳ್ಳ, ಹಂಶಿತ್ ಆಳ್ವ, ನವ್ಯಶ್ರೀ ಕೆ, ಜಯಪ್ರಭಾ ವೈ, ಜಯಲಕ್ಷ್ಮಿ ಎನ್, ಧನ್ಯಶ್ರೀ, ಸ್ವಾತಿ ರೈ, ತನ್ವಿತಾ, ಅಶ್ಮಿತಾ, ಅಂಜನಾ ಕೆ, ರಮ್ಯಾ ಶಿವರಾಜ್, ಶ್ವೇತಾ ಹೊಳ್ಳ, ಸಾನಿಕಾ ಪಿ ಶೆಟ್ಟಿ, ವಿಶಿಕಾ ಎಂ ಶೆಟ್ಟಿ, ಆರಾಧ್ಯ ಎಸ್ ಆಳ್ವ, ಸಾನ್ವಿ ರೈ ಕೆ, ದೃತಿ ಭಂಡಾರಿ, ತನ್ವಿ ಶೆಟ್ಟಿ, ಬಿಂದು ಮಯ್ಯ, ಭಾನ್ವಿ ಕುಲಾಲ್, ತೇಜಸ್, ತೇಜೂಷಾ, ತೇಜಸ್ ಹೊಳ್ಳ, ದೀಕ್ಷಾ ಕುಲಾಲ್, ಪ್ರಣಮ್ಯ, ತನ್ಮಯಿ ಲಕ್ಷ್ಮೀ, ಯಶ್ಪಾಲ್, ಸಾನ್ವಿಕ್, ತನ್ವಿ, ತನಿಷ್ಕ ಎಸ್, ಹಾರ್ಧಿಕ, ಯಾಶಿಕಾ, ಆಹಾನ್ ಎಸ್ ಆಳ್ವ, ಹರ್ಷ ಪುಣಿಯೂರಡ್ಕ, ಮಾನ್ವಿತಾ ಪುನಿಯೂರ್ ಭಾಗವಹಿಸಿದ್ದರು. ಕಲಾವಿದರಿಗೆ ಸಂಸ್ಥೆ ವತಿಯಿಂದ ಗೌರವ ಸ್ಮರಣಿಕೆ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.





