HEALTH TIPS

ಪೆರಡಾಲ ಸರ್ಕಾರಿ ಶಾಲೆಯ ಶ್ರೀಶಾಂತ್ ರಾಜ್ಯಮಟ್ಟದಲ್ಲಿ ಎ ಗ್ರೇಡ್

ಬದಿಯಡ್ಕ: ಪಾಲಕ್ಕಾಡ್‍ನ ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಮೇಳ - ಕಾರ್ಮಿಕ ಅನುಭವ ಮೇಳದ `ಶೀಟ್ ಮೆಟಲ್' ವಿಭಾಗದಲ್ಲಿ ಪೆರಡಾಲ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿ ಶ್ರೀಶಾಂತ್ ಬಾರಡ್ಕ ಎ ಗ್ರೇಡ್ ಪಡೆದಿರುತ್ತಾನೆ. ಈತ ಬಾರಡ್ಕ ನಿವಾಸಿ ವಿಶ್ವನಾಥ ಹಾಗೂ ಶೈಲಜಾ ಕೆ. ಇವರ ಪುತ್ರ. ಅಧ್ಯಾಪಕ ರಂಜಿತ್ ಎ.ಬಿ. ಅವರು ಮಾರ್ಗದರ್ಶನವನ್ನು ನೀಡಿದ್ದರು. ಉಪಜಿಲ್ಲೆಯಲ್ಲಿ ದ್ವಿತೀಯ ಎ ಗ್ರೇಡ್, ಜಿಲ್ಲಾಮಟ್ಟದಲ್ಲಿ ಎ ಗ್ರೇಡ್ ಪ್ರಥಮ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದನು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries