ಕಾಸರಗೋಡು: ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಹಾಗೂ ಕುಟುಂಬಶ್ರೀ, ರೆಸಿಡೆನ್ಶಿಯಲ್ ಅಸೋಸಿಯೇಶನ್ ಹಾಗೂ ಸಂಘ ಸಂಸ್ಥೆಗಳ ಕಾರ್ಯಕರ್ತರಿಗೆ ಸ್ವ ರಕ್ಷಣೆ ಬಗ್ಗೆ ತರಬೇತಿ ನೀಡಲು ಕಾಸರಗೋಡು ಜಿಲ್ಲಾ ಪೆÇಲೀಸರು ಸನ್ನದ್ಧರಾಗಿದ್ದಾರೆ.
ಜಿಲ್ಲೆಯ ವಿವಿಧ ಸಂಸ್ಥೆಗಳ ಕಾರ್ಯಕರ್ತರಿಗೆ ಆತ್ಮರಕ್ಷಣೆಯ ತರಬೇತಿ ನೀಡಲು ಜಿಲ್ಲಾ ಪೊಲೀಸ್ ಈಗಾಗಲೆ ಮುಂದೆ ಬಂದಿದ್ದು, ಇದಕ್ಕಾಗಿ ಹೊಸದಾಗಿ ತರಬೇತಿ ಪಡೆದ ನಾಲ್ವರು ಪುರುಷ ಮಾಸ್ಟರ್ ತರಬೇತುದಾರರು ಮತ್ತು ಆರು ಮಂದಿ ಮಹಿಳಾ ತರಬೇತುದಾರರ ತಂಡವನ್ನು ಸಿದ್ಧಗೊಳಿಸಲಾಗಿದೆ. ಜಿಲ್ಲಾ ಪೆÇಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ ಐಪಿಎಸ್ ಅವರ ನಿರ್ದೇಶನದ ಮೇರೆಗೆ ನೋಡಲ್ ಅಧಿಕಾರಿಯಾಗಿರುವ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಡಾ. ದೇವದಾಸನ್ ಸಿಎಂ ಅವರ ನೇತೃತ್ವದಲ್ಲಿ 13 ಮಂದಿ ಸದಸ್ಯರ ತಂಡವು ಸಿದ್ಧತೆ ನಡೆಸುತ್ತಿದೆ.
ತರಬೇತಿ ಪಡೆಯಲು ಉದ್ದೇಶಿಸಿರುವ ಶಾಲೆಗಳು ಮತ್ತು ಸಂಸ್ಥೆಗಳು ಜಥಿsಠಿಚಿಜmಟಿಞsಜ@gmಚಿiಟ.ಛಿom ಇಮೇಲ್ ಐಡಿ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕೆಂದು ಕಾರ್ಯಕ್ರಮದ ಸಂಯೋಜಕರಾದ ಸಬ್-ಇನ್ಸ್‍ಪೆಕ್ಟರ್ ಕೆ.ಪಿ.ವಿ. ರಾಜೀವನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.




