ಕುಂಬಳೆ: ಬಸ್ಸಿನ ವೇಳಾಪಟ್ಟಿ ವಿಚಾರದಲ್ಲಿ ಕುಂಬಳೆ ಪೇಟೆಯಲ್ಲಿ ಬಸ್ ಸಿಬ್ಬಂದಿ ಮಧ್ಯೆ ನಡೆದ ಘರ್ಷಣೆಯಲ್ಲಿ ಬಸ್ ಚಾಲಕರೊಬ್ಬರು ಗಾಯಗೊಂಡಿದ್ದಾರೆ. ಕಾಸರಗೋಡು-ತಲಪ್ಪಾಡಿ ಮಧ್ಯೆ ಸಂಚರಿಸುವ ಖಾಸಗಿ ಬಸ್ ಸಿಬ್ಬಂದಿ ಕನ್ಯಪ್ಪಾಡಿ ನಿವಾಸಿ ಅಮೀನ್ ಗಾಯಗೊಂಡಿದ್ದು, ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇವರು ನೀಡಿದ ದೂರಿನನ್ವಯ ಇದೇ ರೂಟಲ್ಲಿ ಸಂಚರಿಸುವ ಎರಡು ಖಾಸಗಿ ಬಸ್ ಸಿಬ್ಬಂದಿ ನಿಶಾದ್, ಸಹದ್, ಬಾದಿಶಾ ಹಾಗೂ ಅಮೀರ್ ಎಂಬವರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬಸ್ ವೇಳಾಪಟ್ಟಿ ವಿಚಾರದಲ್ಲಿ ಸಿಬ್ಬಂದಿ ಮಧ್ಯೆ ನಡೆಯುವ ಘರ್ಷಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಬಿ ವಿಜಯಭರತ್ ರೆಡ್ಡಿ ಮಂಜೇಶ್ವರ, ಕುಂಬಳೆ ಮತ್ತು ಬದಿಯಡ್ಕ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.




