ಕಾಸರಗೋಡು: ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಸಾಹಿತ್ಯ ಸಂಘ ಮತ್ತು ಸೀಡ್ ಸಂಘದ ಸಹಯೋಗದಲ್ಲಿ ಕೇರಳ ರಾಜ್ಯೋದಯ ಮತ್ತು ಕನ್ನಡ ರಾಜ್ಯೋತ್ಸವವನ್ನು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ಕೇರಳದ ಭಾಷೆ, ಸಂಸ್ಕೃತಿ,ವೈವಿಧ್ಯತೆಯ ಮಹತ್ವವನ್ನು ಕುರಿತು ಮಾತನಾಡಿದರು. ಶಾಲಾ ಪ್ರಾಂಶುಪಾಲ ಟಿ.ವಿ.ಸುಕುಮಾರನ್ ಶುಭಾಶಂಸನೆಗೈದರು. ವಿದ್ಯಾರ್ಥಿಗಳಿಂದ ನೃತ್ಯ, ಹಾಡು, ಭಾಷಣ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮ ಎಸ್.ಆರ್ ಮತ್ತು ಸಿಂಧು ಶಶೀಂದ್ರನ್, ಅಕಾಡೆಮಿಕ್ ಸಂಘಟಕ ಶೀನಾ ಕೆ.ಪಿ., ಅಧ್ಯಾಪಕ ವೃಂದ ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.




.jpeg)
