ಕಾಸರಗೋಡು: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಮತ್ತು ವಿದ್ಯಾರ್ಥಿಗಳ ಸಾರ್ವಜನಿಕ ಆಯೋಜಿಸಲಾಗಿದೆ.
ಮಕ್ಕಳ ಪ್ರಧಾನಿಯಾಗಿ ಆಯ್ಕೆಯಾದ ಖದೀಜತ್ ಹಸ್ವಾ ಅವರು ವಿದ್ಯಾನಗರ ಸನ್ ರೈಸ್ ಪಾರ್ಕ್ ನಲ್ಲಿ ನಡೆಯುವ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಕ್ಕಳ ಅಧ್ಯಕ್ಷೆ ಕುಮಾರಿ ಪ್ರಣಮ್ಯ ಕೆ.ಎಸ್ ಅಧ್ಯಕ್ಷತೆ ವಹಿಸುವರು. ಮಕ್ಕಳ ವಿರೋಧ ಪಕ್ಷದ ನಾಯಕಿ ವೇದ ನಾಯರ್ ಪಿ ಮುಖ್ಯ ಭಾಷಣ ಮಾಡುವರು. ಮಕ್ಕಳ ವಿಭಾಗದ ಉಪನ್ಯಾಸಕಿ ಕುಮಾರಿ ಶ್ರೀನಂದ ಕೆ ಮತ್ತು ಮಕ್ಕಳ ಪ್ರತಿನಿಧಿ ದಿಲ್ಶಾ ಪಿ ಪಾಲ್ಗೊಳ್ಳುವರು.
ಜಿಲ್ಲಾಧಿಕಾರಿ ಕೆ ಇನ್ಬಾಶೇಖರ್ ಮಕ್ಕಳ ದಿನಾಚರಣೆಯ ಸಂದೇಶ ನೀಡುವರು. ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕಿ ಶೈನಿ.ಆರ್, ಡಿಡಿಇ ಮಧುಸೂದನನ್ ಟಿವಿ, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಮಕ್ಕಳ ರಕ್ಷಣಾ ಅಧಿಕಾರಿ ಶೈನಿ ಐಸಾಕ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಫ್ಸತ್ ಟಿವಿ, ಸಾಮಾಜಿಕ ಕಾರ್ಯಕರ್ತೆ ಮೃದುಲಾ ಬಾಯಿ ಮಣ್ಣೂರ, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಎ. ಕರೀಂ, ಸಿ.ವಿ.ಗಿರೀಶನ್, ಜಯನ್ ಕಾಡಗಂ ಭಾಗವಹಿಸುವರು.




