ಕಾಸರಗೋಡು: ವಿಶೇಷ ತೀವ್ರ ಪರಿಷ್ಕರಣಾ ಗಣತಿ(ಎಸ್‍ಐಆರ್) ನಮೂನೆಗಳ ವಿತರಣೆಯಲ್ಲಿ ಕಾಸರಗೋಡು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಶೇ. 70.08 ರಷ್ಟು ನಮೂನೆಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು 10,78,250 ನಮೂನೆಗಳಲ್ಲಿ ಈಗಾಗಲೇ 7,55,612 ನಮೂನೆಗಳನ್ನು ವಿತರಿಸಲಾಗಿದೆ. ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ಪ್ರಾಥಮಿಕ ಚಟುವಟಿಕೆಗಳು ನವೆಂಬರ್ 4 ರಿಂದ ಡಿಸೆಂಬರ್ 4 ರವರೆಗೆ ಮುಂದುವರಿಯಲಿದೆ. ಮೊದಲ ಹಂತದಲ್ಲಿ ಬೂತ್ ಮಟ್ಟದಲ್ಲಿ ಅಧಿಕಾರಿಗಳು(ಬಿಎಲ್‍ಓ) ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಮಂಜೇಶ್ವರ ಕ್ಷೇತ್ರದಲ್ಲಿ ಶೇ.66.43 (1,50,960) ಫಾರಂಗಳನ್ನು ವಿತರಿಸಲಾಗಿದೆ. ಕಾಸರಗೋಡು ಕ್ಷೇತ್ರದಲ್ಲಿ ಶೇ.70.65 (1,45,633) ಫಾರಂಗಳು, ಉದುಮ ಕ್ಷೇತ್ರದಲ್ಲಿ ಶೇ.66.26 (1,45,363) ಫಾರಂಗಳು, ಮಂಜೇಶ್ವರ ಕ್ಷೇತ್ರದಲ್ಲಿ ಶೇ.66.43 (1,50,960) ಫಾರಂಗಳು, ಕಾಸರಗೋಡು ಕ್ಷೇತ್ರದಲ್ಲಿ ಶೇ.70.65 (1,45,633) ಫಾರಂಗಳು, ಉದುಮ ಕ್ಷೇತ್ರದಲ್ಲಿ ಶೇ.66.26 (1,45,363) ಫಾರಂಗಳನ್ನು ವಿತರಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ಚುನಾವಣಾ ಅಧಿಕಾರಿಯನ್ನು ಜಿಲ್ಲಾಧಿಕಾರಿಗಳು ಮುನ್ನಡೆಸುತ್ತಿದ್ದು, ಬೂತ್ ಮಟ್ಟದ ಅಧಿಕಾರಿಗಳ ತರಬೇತಿ ಈಗಾಗಲೇ ಪೂರ್ಣಗೊಂಡಿದೆ. ಬಿಎಲ್‍ಒ ಬಿಎಲ್‍ಎ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೂತ್ ಮಟ್ಟದಲ್ಲಿ 1884 ಬೂತ್ ಮಟ್ಟದ ಏಜೆಂಟ್‍ಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಎಲ್‍ಒಗಳ ಚಟುವಟಿಕೆಗಳನ್ನು ದುರ್ಬಲಗೊಳಿಸುವ ಕೆಲವೊಂದು ಮಾಧ್ಯಮ ವರದಿಗಳು ಸುಳ್ಳಾಗಿದ್ದು, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.





