ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಗಳಲ್ಲಿ (ಎನ್‌ಆರ್‌ಸಿ) ತನ್ನ ಉತ್ಪನ್ನವಾದ ಎಸ್ಸೆ ಸಿಗರೇಟ್‌ಗಳನ್ನು ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಕೊರಿಯಾದ ಕೊರಿಯಾ ಟೊಬ್ಯಾಕೊ ಆಯಂಡ್ ಜಿನ್ಸೆಂಗ್ ಕಾರ್ಪೊರೇಷನ್ ಕಂಪನಿ ಜನರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ 130 ನೋಟಿಸ್‌ಗಳನ್ನು ನೀಡಿದೆ.
ಜಾಗತಿಕವಾಗಿ ಸೇವಿಸುತ್ತಿರುವ ಎಸ್ಸೆ ಕಂಪನಿಯ ಸಿಗರೇಟ್‌ಗಳಲ್ಲಿ ಶೇ 11.6ರಷ್ಟು ಅಕ್ರಮವಾಗಿದ್ದು, ಇದರಿಂದ ₹3,592 ಕೋಟಿಗೂ ಹೆಚ್ಚು ತೆರಿಗೆ ನಷ್ಟವಾಗಿದೆ ಎಂದು ಕಂಪನಿ ಆರೋಪಿಸಿದೆ.




