ಉಪ್ಪಳ: ಸ್ಕೂಟರ್ ಮಗುಚಿಬಿದ್ದು, ಗಾಯಗೊಂಡಿದ್ದ ಹಿಂಬದಿ ಸವಾರ ಬಾಯಾರು ಕೊಜಪ್ಪೆ ನಿವಾಸಿ ಇಬ್ರಾಹಿಂ(66)ಮೃತಪಟ್ಟಿದ್ದಾರೆ. ಶುಕ್ರವಾರ ಇವರ ಪುತ್ರ ಚಲಾಯಿಸುತ್ತಿದ್ದ ಇಲೆಕ್ಟ್ರಿಕಲ್ ಸ್ಕೂಟರಲ್ಲಿ ಕುಳಿತು ಪ್ರಯಾಣಿಸುವ ಮಧ್ಯೆ ಕೊಜಪ್ಪೆ ಜಂಕ್ಷನ್ ಬಳಿ ಸ್ಕೂಟರ್ ಆಯತಪ್ಪಿ ಬಿದ್ದು, ಗಂಭೀರ ಗಾಯಗೊಂಡಿದ್ದ ಇಬ್ರಾಹಿಂ ಅವರನ್ನು ಮಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಪುತ್ರ ಅಶ್ರಫ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.




