ಮಂಜೇಶ್ವರ: ವರ್ಕಾಡಿ ಬೋಳದ ಪದವು ಶ್ರೀ ಬ್ರಹ್ಮ ಮುಗೇರ ಕೊರಗಜ್ಜ ಹಾಗೂ ಗುಳಿಗ ಸಾನಿಧ್ಯಗಳ ಆಡಳಿತ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ದೈವಸ್ಥಾನದ ವಠಾರದಲ್ಲಿ ಜರುಗಿತು. ಸೇವಾ ಸಮಿತಿಯ ಅಧ್ಯಕ್ಷ ಶೀನ ಬೋಳದ ಪದವು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಆಡಳಿತ ಸಮಿತಿಯ ಅಧ್ಯಕ್ಷರಾಗಿ ವಿಶ್ವನಾಥ ರೈ ಅಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಐತ್ತಪ್ಪ ಶೆಟ್ಟಿ ದೇವಂದ ಪಡ್ಪು ಉಪಾಧ್ಯಕ್ಷ, ರವಿ ಮುಡಿಮಾರು ಪ್ರಧಾನ ಕಾರ್ಯದರ್ಶಿ, ಮನೋಜ್ ಶೆಟ್ಟಿ ಭಂಡಾರ ಮನೆ ವರ್ಕಾಡಿ ಕೋಶಾಧಿಕಾರಿ, ನವೀನ್ ಶೆಟ್ಟಿ ಮಂಗಲ್ಪಾಡಿ ಪ್ರಧಾನ ಸಂಚಾಲಕರಾಗಿ ಆಯ್ಕೆಯಾದರು.
ಗೌರವ ಸಲಹೆಗಾರರು ಮತ್ತು ಕಾರ್ಯಕಾರಿ ಸಮಿತಿಯ ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಕ್ಷೇತ್ರದ ಮುಂದಿನ ಅಭಿವೃದ್ಧಿ ಕೆಲಸಗಳು ಮತ್ತು 2026 ಏ.5ರಂದು ನಡೆಯಲಿರುವ ನೇಏಮೋತ್ಸವ ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.





