ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯಂದು ಶಾಲಾ ಬಾಲ ಕಲೋತ್ಸವದಲ್ಲಿ ರನ್ನರ್ಸ್ ಆಪ್ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರತಿಭೆಗೊಂದು ಪುರಸ್ಕಾರ ಕಾರ್ಯಕ್ರಮದೊಂದಿಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ಉಮಾಶಂಕರಿ ಭಟ್, ಡಾ.ಉದಯಶಂಕರ್ ಭಟ್ ಬಹುಮಾನಗಳನ್ನು ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲಾ ಪ್ರಬಂಧಕ ಡಾ.ಜಯಪ್ರಕಾಶ ನಾರಾಯಣ ಬಹುಮಾನ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ಸಂದರ್ಭ ಪ್ರಮೀಳ ಚುಳ್ಳಿಕಾನ ಇವರು ನೀಡಿದ ಕಥೆ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.




.jpg)
