ಪತ್ತನಂತಿಟ್ಟ: ಶಬರಿಮಲೆಯಲ್ಲಿ ಸುರಕ್ಷತಾ ಕ್ರಮ ಬಿಗುಗೊಳಿಸಲಾಗಿದ್ದು, ಸನ್ನಿಧಾನ ಹಾಗೂ ಆಸುಪಾಸು ರಕ್ಷಣಾ ಕಾರ್ಯಗಳಿಗೆ ಕೇಂದ್ರ ಪಡೆಯನ್ನು ನಿಯೋಜಿಸಲಾಘಿದೆ. ಆರ್‍ಪಿಎಫ್‍ನ 140 ಯೋಧರನ್ನೊಳಗೊಂಡ ಕೊಯಂಬತ್ತೂರಿನ 105ನೇ ಬೆಟಾಲಿಯನನ್ನು ಸನ್ನಿಧಾನದಲ್ಲಿ ನಿಯೋಜಿಸಲಾಗಿದ್ದು, ಶನಿವಾರದಿಂದ ಭದ್ರತಾ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ.
ಮುಂದಿನ ದಿನಗಳಲ್ಲಿ ಸನ್ನಿಧಾನ, ಭಸ್ಮ ಕೆರೆ, ಗರ್ಭಗುಡಿ ಆಸುಪಾಸು, ಅಪ್ಪ-ಅರವಣ ಪಾಯಸ ವಿತರಣಾ ಕೌಂಟರ್‍ಗಳ ಭದ್ರತಾ ಹೊಣೆಗಾರಿಕೆಯನ್ನು ಆರ್‍ಪಿಎಪ್ ವಹಿಸಿಕೊಮಡಿದೆ. ಸಿಆರ್‍ಪಿಎಫ್ ಡಎಪ್ಟಯುಟಿ ಕಮಾಂಡೆಂಟ್ ಬಿಜು ಅವರಿಗೆ ಭದ್ರತೆ ಹೊಣೆಗಾರಿಕೆ ವಹಿಸಿಕೊಡಲಾಗಿದ್ದು, ಕೇರಳ ಪೊಲೀಸರ ಭದ್ರತಾ ವ್ಯವಸ್ಥೆ ಈ ಹಿಂದಿನಂತೆ ಮುಂದುವರಿಯಲಿದೆ. ಭದ್ರತೆಗೆ ಹೆಚ್ಚಿನ ಪಡೆ ಕಳುಹಿಸಿಕೊಡಲು ಕೇಂದ್ರ ಸನ್ನದ್ಧವಾಗಿರುವುದಾಗಿ ದೇವಸ್ವಂ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವರಿಂದ ಅವಲೋಕನ:
ರಾಜ್ಯ ಮುಜರಾಯಿ ಖಾತೆ ಸಚಿವ ವಿ.ಎನ್. ವಾಸವನ್ ಶಬರಿಮಲೆಗೆ ಶನಿವಾರ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದರು. ರಾಜ್ಯ ಹೈಕೋರ್ಟಿನ ಶಿಫಾರಸಿನ ಮೇರೆಗೆ ಸ್ಪಾಟ್ ಬುಕ್ಕಿಂಗ್ ಸಂಖ್ಯೆ 20ಸಾವಿರದಿಂದ 5ಸಾವಿರಕ್ಕಿಳಿಸುತ್ತಿದ್ದಂತೆ ಭಕ್ತಾದಿಗಳ ಸಂದಣಿ ಗಣನೀಯವಾಗಿ ಕಡಿಮೆಯಾಗಿದ್ದು, ಭಕ್ತಾದಿಗಳಿಗೆ ದೇವರ ದರ್ಶನ ಸುಗಮವಾಗುತ್ತಿದೆ. ಈ ವರ್ಷದ ಮಂಡಲ ಉತ್ಸವ ತೀರ್ಥಾಟನೆ ನ. 16ರಿಂದ ಆರಂಭಗೊಂಡಿದ್ದು, ಐದು ಲಕ್ಷಕ್ಕೂ ಹೆಚ್ಚುಮಂದಿ ಭಕ್ತಾದಿಗಳು ದೇವರ ದರ್ಶನ ಪಡೆದಿದ್ದಾರೆ. ಶುಕ್ರವಾರ ಒಂದೇ ದಿನ 72037ಮಂದಿ ದರ್ಶನ ಪಡೆದುಕೊಂಡಿದ್ದಾರೆ.




