HEALTH TIPS

ಆಕ್ಸ್ಫರ್ಡ್ 2025ರ ಪದ 'ರೇಜ್ ಬೇಟ್' ಎಂದರೇನು?

ಸಾರ್ವಜನಿಕವಾಗಿ ಮತದಾನದ ನಂತರ ಅಂತಿಮವಾಗಿ 'ರೇಜ್ ಬೇಟ್' ವರ್ಷದ ಪದವಾಗಿ ಆಯ್ಕೆಯಾಗಿದೆ. ಡಿಜಿಟಲ್ ಪರಿಸರದಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಒತ್ತಡ ಹೇರುವ ತಂತ್ರವನ್ನು ಈ ಪದ ಉಲ್ಲೇಖಿಸುತ್ತದೆ.

2025ರ ವರ್ಷದ ಆಕ್ಸ್ಫರ್ಡ್ ಪದವಾಗಿ 'ರೇಜ್ ಬೇಟ್' ಅನ್ನು ಆಯ್ಕೆ ಮಾಡಲಾಗಿದೆ.

'ರೇಜ್ ಬೇಟ್' ಪದದ ಬಳಕೆ ಹೆಚ್ಚಾಗುತ್ತಿರುವುದು ಆನ್ಲೈನ್ ವಂಚನೆಯ ಕುಶಲ ತಂತ್ರಗಳ ಬಗ್ಗೆ ಜನರಲ್ಲಿನ ಜಾಗೃತಿಯನ್ನು ಸೂಚಿಸುತ್ತಿದೆ ಎಂದು ಆಕ್ಸ್ಫರ್ಡ್ ಭಾಷೆಗಳ ಅಧ್ಯಕ್ಷ ಕ್ಯಾಸ್ಪರ್ ಗ್ರಾಥ್ವೋಲ್ ತಿಳಿಸಿದ್ದಾರೆ.

2025 ಅನ್ನು ರೂಪಿಸಿದ ಕೆಲವು ಮನಸ್ಥಿತಿಗಳು ಮತ್ತು ಸಂಭಾಷಣೆಗಳನ್ನು ಪ್ರತಿಬಿಂಬಿಸುವ ಪದಗಳನ್ನು ಆಕ್ಸ್ಫರ್ಡ್ ವ್ಯಾಖ್ಯಾನಿಸುತ್ತದೆ. ಅಂತಹ ಉದ್ದೇಶದಿಂದ ಕೆಲವು ಪದಗಳನ್ನು ಆರಿಸಿಕೊಂಡಿದೆ. ವರ್ಷದ ಇತರ ಎರಡು ಪದಗಳಾದ 'ಔರಾ ಫಾರ್ಮಿಂಗ್' ಮತ್ತು 'ಬಯೋ ಹ್ಯಾಕ್' ನಡುವೆ 'ರೇಜ್ ಬೇಟ್' ಮೊದಲ ಸ್ಥಾನಗಳಿಸಿದೆ.

ಡಿಜಿಟಲ್ ಪರಿಸರದಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಬಳಸುವ ತಂತ್ರವನ್ನು ಈ ಪದ ಉಲ್ಲೇಖಿಸುತ್ತದೆ. ಸಾರ್ವಜನಿಕವಾಗಿ ಮತದಾನದ ನಂತರ ಅಂತಿಮವಾಗಿ 'ರೇಜ್ ಬೇಟ್' ಆಯ್ಕೆಯಾಗಿದೆ.

'ರೇಜ್ ಬೇಟ್' ಎಂದರೇನು?

ನಿಮ್ಮ ಸಾಮಾಜಿಕ ಮಾಧ್ಯಮದ ಫೀಡ್ ಅನ್ನು ನೋಡುತ್ತಾ ಹೋಗುತ್ತಿದ್ದಂತೆ ನಿಮಗೆ ಕಿರಿಕಿರಿ ಹೆಚ್ಚಾಗುತ್ತದೆಯೆ? ಹಾಗಿದ್ದರೆ, ನೀವು ರೇಜ್ ಬೇಟ್ನ ಸಂತ್ರಸ್ತರಾಗಿದ್ದೀರಿ ಎಂದು ಅರ್ಥ. ಆನ್ಲೈನ್ನಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಬಳಸುವ ಕುಶಲ ತಂತ್ರಗಳನ್ನು ವಿವರಿಸುವ ಪದವಿದು. ಕಳೆದ ಒಂದು ವರ್ಷದಲ್ಲಿ ಈ ಪದದ ಬಳಕೆ ಮೂರುಪಟ್ಟು ಹೆಚ್ಚಾಗಿದೆ ಎಂದು ಆಕ್ಸ್ಫರ್ಡ್ ತಿಳಿಸಿದೆ.

ನಿಮಗೆ 'ರೇಜ್ ಬೇಟ್' ಪದದ ಅರ್ಥ ಗೊತ್ತಿಲ್ಲದಿದ್ದರೂ ನೀವು ಸಾಮಾಜಿಕ ಮಾಧ್ಯಮದ ಬಳಕೆದಾರರಾಗಿದ್ದಲ್ಲಿ ನಿಮಗೆ ಅದರ ಅನುಭವವಾಗಿರಬಹುದು.

ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಪ್ರಕಟಿಸುವ ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ಹೇಳಿರುವ ಪ್ರಕಾರ, ಇದನ್ನು "ಉದ್ದೇಶಪೂರ್ವಕವಾಗಿ ಕೋಪ ಅಥವಾ ಆಕ್ರೋಶವನ್ನು ಹುಟ್ಟುಹಾಕಲು, ನಿರಾಶಾದಾಯಕ, ಪ್ರಚೋದನಕಾರಿ ಅಥವಾ ಆಕ್ರಮಣಕಾರಿಯಾಗಿ ವಿನ್ಯಾಸಗೊಳಿಸಲಾದ ಆನ್ಲೈನ್ ವಿಷಯ" ಎಂದು ವ್ಯಾಖ್ಯಾನಿಸಲಾಗಿದೆ.

ಇದು ಮತ್ತೊಂದು ಪದ 'ಕ್ಲಿಕ್ಬೈಟ್'ಗೆ ಸಮಾನವಾಗಿದೆ. 'ಕ್ಲಿಕ್ಬೈಟ್' ಎಂದರೆ ಒಂದು ಲೇಖನ ಅಥವಾ ವಿಡಿಯೋವನ್ನು ವೀಕ್ಷಿಸಲು ರೋಚಕ ಹೆಡ್ಲೈನ್ ನೀಡಿ ಬಳಕೆದಾರರನ್ನು ಆಕರ್ಷಿಸುವುದು ಆಗಿರುತ್ತದೆ. ಆದರೆ 'ರೇಜ್ ಬೇಟ್' ಪದ ನಿರ್ದಿಷ್ಟವಾಗಿ ಗುರಿ ಮಾಡಿ ಕಂಟೆಂಟ್ ನೀಡುವುದಕ್ಕೆ ಸಂಬಂಧಪಟ್ಟಿದೆ.

ಮೊದಲು ಕ್ಲಿಕ್ಗಳಿಂದ ಕುತೂಹಲಕ್ಕೆ ಎಡೆ ಮಾಡುವತ್ತ ಇಂಟರ್ನೆಟ್ ಗಮನಹರಿಸಿತ್ತು. ಆದರೆ ಇದೀಗ ಭಾವನೆಗಳು ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಪ್ರಭಾವಿಸುವ ನಾಟಕೀಯ ಬದಲಾವಣೆಯನ್ನು ಕಂಡಿದ್ದೇವೆ. ಆದರೆ 'ರೇಜ್ ಬೇಟ್' ಪದ ಹೆಚ್ಚು ಚಾಲ್ತಿಯಲ್ಲಿರುವ ಕಾರಣದಿಂದ ಜನರಿಗೆ ಆನ್ಲೈನ್ ಕುಶಲತೆ ಅರ್ಥವಾಗುತ್ತಿದೆ ಮತ್ತು ಜಾಗೃತಿ ಬೆಳೆಯುತ್ತಿದೆ ಎಂದು ಅರ್ಥಮಾಡಿಕೊಳ್ಳಬಹುದು.

"ರೇಜ್ ಬೇಟ್ ಪದದ ಪ್ರಯೋಗ ಹೆಚ್ಚಾಗಿರುವುದನ್ನು ಕಂಡರೆ, ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ಆನ್ಲೈನ್ ಸಂಸ್ಕೃತಿಯ ತೀವ್ರತೆಯ ನಡುವೆ ಮಾನವನಾಗಿರುವುದು ಎಂದರೇನು ಎನ್ನುವತ್ತ ಸಹಜವಾದ ಸಂವಾದದತ್ತ ಮುನ್ನುಗ್ಗುತ್ತಿದ್ದೇವೆ ಎನ್ನುವ ಅನುಭವವಾಗುತ್ತಿದೆ" ಎಂದು ಕ್ಯಾಸ್ಪರ್ ಗ್ರಾಥ್ವೋಲ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries