ಕಾಸರಗೋಡು: ಬಿಎಂಎಸ್‍ನ ಕಾರ್ಯಕರ್ತ, ಕಾಸರಗೋಡಿನ ಮೀಪುಗುರಿ ನಿವಾಸಿ ಬಿ.ಟಿ ವಿಜಯನ್ ಎಂಬವರನ್ನು ಕೊಲೆಗೈದ ಪ್ರಕರಣದ ಆರೋಪಿಯೊಬ್ಬನನ್ನು26ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಆರಿಕ್ಕಾಡಿ ಬನ್ನಂಗಳ ನಿವಾಸಿ ಮಹಮ್ಮದ್ ಇಕ್ಬಾಲ್ ಯಾನೆ ಇಕ್ಕು ಬಂಧಿತ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಣಗ ಬಂಧನ ವಿಧಿಸಲಾಗಿದೆ. 25ವರ್ಷಗಳ ಹಿಂದೆ ಬಿಎಂಎಸ್ ಸಕ್ರಿಯ ಕಾರ್ಯಕರ್ತ ಬಿ.ಟಿ ವಿಜಯನ್ ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಮಹಮ್ಮದ್ ಇಕ್ಬಾಲ್ ವಿರುದ್ಧ ಕೇಸು ದಾಖಲಿಸಿಕೊಳ್ಳುತ್ತಿದ್ದಂತೆ ಈತ ವಿದೇಶಕ್ಕೆ ಪರಾರಿಯಾಗಿದ್ದನು. ದುಬೈ ತೆರಳಿದ್ದ ಮಹಮ್ಮದ್ ಇಕ್ಬಾಲ್‍ನನ್ನು ಅಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿಸಿ ಕಾರಾಗೃಹದಲ್ಲಿರಿಸಲಾಗಿತ್ತು. ಶಿಕ್ಷೆ ಕಾಲಾವಧಿ ಪೂರ್ಣಗೊಂಡು ಬಿಡುಗಡೆಯಾದ ಈತ ಊರಿಗೆ ವಾಪಸಾಗಿದ್ದನು. ಕುಂಬಳೆ ಠಾಣೆ ಪೊಲೀಸರು ಅತ್ಯಂತ ಸಾಹಸಿಕವಾಗಿ ಈತನನ್ನು ಆರಿಕ್ಕಾಡಿಯಿಂದ ಸೆರೆಹಿಡಿದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ನಿರ್ದೇಶ ಪ್ರಕಾರ ಎಎಸ್‍ಪಿ ಡಾ. ನಂದಗೋಪನ್ ಮೇಲ್ನೋಟದಸಲ್ಲಿ ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಮುಕುಂದನ್ ಟಿ.ಕೆ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.




