ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಅಂಗವಾಗಿ, ಜಿಲ್ಲೆಯ ವಿವಿಧ ಬ್ಲಾಕ್ ಪಂಚಾಯಿತಿ ಮತ್ತು ನಗರಸಭೆಯ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಸ್ಟ್ರಾಂಗ್ ರೂಮ್, ವಿತರಣಾ ಮತ್ತು ಸಂಗ್ರಹಣಾ ಕೇಂದ್ರಗಳಿಗೆ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಭೇಟಿ ನೀಡಿದರು.
ಕುಂಬಳೆಯ ಜಿ.ಎಚ್.ಎಸ್.ಎಸ್., ಕಾಸರಗೋಡು ಸರ್ಕಾರಿ ಕಾಲೇಜು, ಬಿ.ಎ.ಆರ್.ಎಚ್.ಎಸ್.ಎಸ್. ಬೋವಿಕ್ಕಾನಂ, ಕಾಞಂಗಾಡ್‍ನ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಹೊಸದುರ್ಗ ಜಿಎಚ್‍ಎಸ್‍ಎಸ್, ಪರಪ್ಪ ಜಿಎಚ್‍ಎಸ್‍ಎಸ್ ಮತ್ತು ಪಡನ್ನಕ್ಕಾಡ್‍ನ ನೆಹರು ಕಾಲೇಜಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಭದ್ರತ ಕಾರ್ಯಗಳ ಬಗ್ಗೆ ಅವಲೋಕನ ನಡೆಸಿದರು.





