ಕಾಸರಗೋಡು: ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಎಆರ್‍ಟಿ ಸೆಂಟರ್ ಆಶ್ರಯದಲ್ಲಿ ಎಚ್‍ಐವಿ/ಏಡ್ಸ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಮಹಿಳಾ ಐಎಂಎ ಕಾಸರಗೋಡು ಘಟಕ ಅಧ್ಯಕ್ಷೆ ಡಾ. ಸುಧಾ ಭಟ್ ಸಮಾರಂಭ ಉದ್ಘಾಟಿಸಿದರು.
ಮುಖ್ಯ ಸಲಹೆಗಾರ ಡಾ. ಪಿ. ಕೃಷ್ಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಎ.ಆರ್.ಟಿ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ಫಾತಿಮಾ ಮುಬೀನಾ ಮುಖ್ಯ ಭಾಷಣ ಮಾಡಿದರು. ಐ.ಎಂ.ಎ ಜಿಲ್ಲಾ ಅಧ್ಯಕ್ಷ ಡಾ. ಬಿ. ನಾರಾಯಣ ನಯ್ಕ್ ಕೆಂಪು ರಿಬ್ಬನ್ ಕತ್ತರಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು. ನಸಿರ್ಂಗ್ ಸೂಪರಿಂಟೆಂಡೆಂಟ್ ಲತಾ ಎ ಅವರು ಏಡ್ಸ್ ದಿನದ ಸಂದೇಶ ನೀಡಿದರು. ಸಬಿತಾ ಮ್ಯಾನುಯೆಲ್, ಕವಿತಾ ಕರುಣಾಕರನ್, ಕುಞÂಕೃಷ್ಣನ್, ರಾಧಾಕೃಷ್ಣನ್ ಉಪಸ್ಥಿತರಿದ್ದರು. ಫಾರ್ಮಸಿಸ್ಟ್ ಸಿಎ ಯೂಸುಫ್ ಸ್ವಾಗತಿಸಿದರು ಮತ್ತು ಐಸಿಟಿಸಿ ಕೌನ್ಸಿಲರ್ ಅಜಿ ಅಲೆಕ್ಸ್ ವಂದಿಸಿದರು. ಆಪ್ತ ಸಮಾಲೋಚಕ ಅನಿಲ್‍ಕುಮಾರ್ ಪ್ರಮಾಣ ವಚನ ಬೋಧಿಸಿದರು. ಪಿ.ಕೆ. ಸಿಂಧು, ಎಸ್. ಪ್ರಮೀಳಾ ಕುಮಾರಿ, ಪ್ರಬಿತಾ ಬಾಲನ್ ಮತ್ತು ಫಿದಾ ಹಸನ್ ನೇತೃತ್ವ ವಹಿಸಿದ್ದರು. ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ವಿತರಿಸಲಾಯಿತು.





