HEALTH TIPS

ಅಮೆರಿಕದಿಂದ ಈ ವರ್ಷ 3258 ಭಾರತೀಯರ ಗಡಿಪಾರು: ರಾಜ್ಯಸಭೆಗೆ ಸಚಿವ ಜೈಶಂಕರ್ ಮಾಹಿತಿ

ನವದೆಹಲಿ: ಈ ವರ್ಷದಲ್ಲಿ 3258 ಮಂದಿ ಸೇರಿದಂತೆ, ಅಮೆರಿಕವು 2009ರಿಂದೀಚೆಗೆ ಸುಮಾರು 18,822 ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿ ಸಂದರ್ಭ ವಿದೇಶಾಂಗ ವ್ಯವಹಾರಗಳಸಚಿವ ಎಸ್.ಜೈಶಂಕರ್ ಈ ಮಾಹಿತಿಯನ್ನು ನೀಡಿದ್ದಾರೆ.

ವಿದೇಶಗಳಿಗೆ ಮಾನವಕಳ್ಳಸಾಗಣೆಯ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ತನಿಖೆಯನ್ನು ನಡೆಸುತ್ತಿದೆ. ಪಂಜಾಬ್ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾನವಕಳ್ಳಸಾಗಣೆಯ ಪ್ರಕರಣಗಳು ವರದಿಯಾಗಿವೆ ಎಂದವರು ಸದನಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2023ರಲ್ಲಿ 617 ಹಾಗೂ2024ರಲ್ಲಿ 1368 ಮಂದಿ ಭಾರತೀಯರು ಅಮೆರಿಕದಿಂದ ಗಡಿಪಾರಾಗಿದ್ದಾರೆಂದು ಅವರು ತಿಳಿಸಿದರು.

''2025ರ ಜನವರಿಯಿಂದೀಚೆಗೆ ಒಟ್ಟು 3258 ಮಂದಿ ಭಾರತೀಯರನ್ನು ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಅವರಲ್ಲಿ 2032 ಮಂದಿಯನ್ನು ನಿಯಮಿತವಾದ ವಾಣಿಜ್ಯ ವಿಮಾನಗಳಲ್ಲಿ ಗಡಿಪಾರು ಮಾಡಲಾಗಿದ್ದರೆ, ಉಳಿದ 1226 (37.6 ಶೇ.) ಮಂದಿ ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ ಇಲಾಖೆ (ಐಸಿಇ) ಅಥವಾ ಅಮೆರಿಕದ ಕಸ್ಟಮ್ಸ್ ಹಾಗೂ ಗಡಿ ಸಂರಕ್ಷಣಾ ಇಲಾಖೆ (ಸಿಬಿಪಿ)ಯ ವಿಮಾನಗಳಲ್ಲಿ ಸ್ವದೇಶಕ್ಕೆ ಆಗಮಿಸಿದ್ದಾರೆ'' ಎಂದು ಸಚಿವರು ಹೇಳಿದರು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೇಶಾದ್ಯಂತ 27 ಮಾನವಕಳ್ಳಸಾಗಣೆಯ ಪ್ರಕರಣಗಳನ್ನು ದಾಖಲಿಸಿಕೊಂಡು,ತನಿಖೆ ನಡೆಸಿದೆ. ಈ ಸಂಬಂಧವಾಗಿ 169 ಮಂದಿಯನ್ನು ಬಂಧಿಸಿದ್ದು, 132 ವ್ಯಕ್ತಿಗಳ ವಿರುದ್ಧ ದೋಷಾರೋಪ ದಾಖಲಿಸಿದೆ. ಎನ್‌ಐಎ ಆಗಸ್ಟ್ 7ರಂದು ಹರ್ಯಾಣ ಹಾಗೂ ಪಂಜಾಬ್‌ನಲ್ಲಿ ಇಬ್ಬರು ಪ್ರಮುಖ ಮಾನವಕಳ್ಳಸಾಗಣೆದಾರರನ್ನು ಮತ್ತು ಆನಂತರ ಆಕ್ಟೋಬರ್ 2ರಂದು ಹಿಮಾಚಲಪ್ರದೇಶದಲ್ಲಿ ಇನ್ನಿಬ್ಬರನ್ನು ಬಂಧಿಸಿದೆ.

ಪಂಜಾಬ್‌ನಲ್ಲಿ ಗರಿಷ್ಠ ಮಾನವಕಳ್ಳಸಾಗಣೆಯ ಪ್ರಕರಣಗಳು ವರದಿಯಾಗಿದ್ದು, ರಾಜ್ಯ ಸರಕಾರವು ಈ ನಿಟ್ಚಿನಲ್ಲಿ ವಿಶೇಷ ತನಿಖಾ ತಂಡ ಹಾಗೂ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. 58 ಮಂದಿ ಅಕ್ರಮ ಏಜೆಂಟರ ವಿರುದ್ಧ 25 ಎಫ್‌ಐಆರ್ ದಾಖಲಾಗಿದ್ದರೆ, 16 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಗಡಿಪಾರುಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಗಡಿಪಾರುಗೊಂಡವರನ್ನು ಮಾನವೀಯವಾಗಿ ನಡೆಸಿಕೊಳ್ಳುವುದನ್ನು ಖಾತರಿಪಡಿಸಲು ವಿದೇಶಾಂಗ ಸಚಿವಾಲಯವು ಅಮೆರಿಕದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.

ಗಡಿಪಾರುಗೊಂಡವರನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ಕೋಳಗಳನ್ನು ತೊಡಗಿಸಲಾಗುತ್ತಿರುವ ಬಗ್ಗೆ ತನ್ನ ಸಚಿವಾಲಯವು ತನ್ನ ಗಾಢವಾದ ಕಳವಳವನ್ನು ವ್ಯಕ್ತಪಡಿಸಿದೆ ಎಂದು ಜೈಶಂಕರ್ ಸದನಕ್ಕೆ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries