ಮುಂಬೈ: ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣದಲ್ಲಿ ಬಂಧಿತರಾದ ಐದು ವರ್ಷಗಳ ಬಳಿಕ ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಹನಿ ಬಾಬು ಅವರಿಗೆ ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಹಾಗೂ ರಂಜಿತ್ ಸಿನ್ಹ ಭೋಸ್ಲೆ ಅವರ ವಿಭಾಗೀಯ ಪೀಠ ಹನಿ ಬಾಬು ಅವರಿಗೆ ಜಾಮೀನು ನೀಡಿತು.
ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಜಾಮೀನಿಗೆ ತಡೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮನವಿ ಮಾಡಿತು. ಆದರೆ, ಎನ್‌ಐಎಯ ಮನವಿಯನ್ನು ಉಚ್ಚ ನ್ಯಾಯಾಲಯ ನಿರಾಕರಿಸಿತು.
ವಿಚಾರಣೆ ಇಲ್ಲದೆ, ತಾನು ಬಹು ಕಾಲದಿಂದ ಜೈಲಿನಲ್ಲಿದ್ದೇನೆ. ಆದುದರಿಂದ ಜಾಮೀನು ನೀಡುವಂತೆ ಹನಿ ಬಾಬು ಮನವಿ ಮಾಡಿದ್ದರು.




