ಉಪ್ಪಳ: 'ಸ್ಕೋಲ್ ಕೇರಳ' ವತಿಯಿಂದ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಪರೀಕ್ಷಾ ಕೇಂದ್ರವಾಗಿ ಲಭಿಸಿರುವ, ಹೈಯರ್ ಸೆಕೆಂಡರಿ ಓಪನ್ ಸ್ಕೂಲ್ 2025-27 ಬ್ಯಾಚಿನ ಪ್ಲಸ್ ವನ್ ಪರೀಕ್ಷೆಗೆ ದಾಖಲಾತಿ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ 2024-26 ಬ್ಯಾಚಿನ ಪ್ಲಸ್ ಟು ಪರೀಕ್ಷೆಗೆ ದಾಖಲಾತಿ ಮಾಡಿದ ವಿದ್ಯಾರ್ಥಿಗಳಿಗೂ ಓರಿಯೆಂಟೇಷನ್ ತರಗತಿ ಡಿ. 8 ರಂದು ಜರುಗಲಿರುವುದು. ಈ ಎರಡೂ ಬ್ಯಾಚಿನ ವಿದ್ಯಾರ್ಥಿಗಳು ಆ ದಿನ ಬೆಳಿಗ್ಗೆ 10ಕ್ಕೆ ಶಾಲೆಗೆ ತಲುಪಬೇಕಾಗಿ ಶಾಲಾ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




