ಕುಂಬಳೆ: ಜಿಲ್ಲೆಯ ಜನಪ್ರಿಯ ಲೇಖಕಿ ಪ್ರಸನ್ನಾ ವಿ. ಚೆಕ್ಕೆಮನೆ ಅವರ ಎರಡು ಕಾದಂಬರಿಗಳಾದ ' ಹೃದಯ ಮುರಳಿ ಮಿಡಿದ ರಾಗ' ಮತ್ತು ' ಉಲಿಯುವ ಗೆಜ್ಜೆ ನಲಿಯುವ ಹೆಜ್ಜೆ ' ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಕಂಬಾರಿನಲ್ಲಿ ಜರುಗಿತು.
ಕ್ಷೇತ್ರದ ಅನುವಂಶಿಕ ಮೊಕ್ತೇಸರ, ಜ್ಯೋತಿಷಿ, ಸಾಹಿತಿಗಳೂ ಆಗಿರುವ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್ ಮತ್ತು ಪತ್ನಿ ವೀಣಾ ಎಲ್. ಭಟ್ ದಂಪತಿ ತಮ್ಮನಿವಾಸದಲ್ಲಿನಡೆದ ಸರಳ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿದರು.
ಗೃಹಿಣಿಯಾಗಿದ್ದುಕೊಂಡು ನಿರಂತರ ಸಾಧನೆಯಿಂದ ಸಾಹಿತ್ಯಕೃಷಿ ಮಾಡುವ ಪ್ರಸನ್ನಾ ಚೆಕ್ಕೆಮನೆಯವರ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಪ್ರಸಕ್ತ ನಡೆಯುವಂತಹ ವಿಷಯಗಳನ್ನೇ ವಸ್ತುವನ್ನಾಗಿಸಿ ಅವರು ಬರೆಯುವ ಕಾದಂಬರಿಗಳು ಓದುಗರ ಮನಸ್ಸಿಗೆ ಆಪ್ತವಾಗುತ್ತಿದೆ. ಸಾಹಿತ್ಯಕ್ಷೇತ್ರದ ಧ್ರುವತಾರೆಯಂತೆ ಮಿಂಚುತ್ತಿರುವ ಅವರ ಸಾಹಿತ್ಯಗಳು ಕನ್ನಡ ಸಾಹಿತ್ಯಕ್ಷೇತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸಲಿ ಎಂದು ಯನ್. ಯಚ್. ಲಕ್ಷ್ಮೀನಾರಾಯಣ ಭಟ್ ತಿಳಿಸಿದರು.
ಮೈಸೂರಿನ ತಿರುಮಲ ಪ್ರಕಾಶನದವರು ಈ ಕೃತಿಗಳನ್ನು ಪ್ರಕಟಿಸಿದ್ದಾರೆ. ಲೇಖಕಿ ಪ್ರಸನ್ನಾ ವಿ. ಚೆಕ್ಕೆಮನೆ ಉಪಸ್ಥಿತರಿದ್ದರು.





