HEALTH TIPS

ತುರ್ತು ಕರೆ-ಪೊಲೀಸರ ಹಾದಿ ತಪ್ಪಿಸಲೆತ್ನಿಸಿದಾತಗೆ ಕೇಸು

ಉಪ್ಪಳ: ತುರ್ತು ಸಂದರ್ಭ ಕರೆಮಾಡುವ ಐಆರ್‍ಎಸ್ಸೆಸ್ ಸಂಖ್ಯೆಗೆ ಕರೆಮಾಡುವ ಮೂಲಕ ಪೊಲೀಸರ ಹಾದಿ ತಪ್ಪಿಸಲೆತ್ನಿಸಿದ ಉಪ್ಪಳ ನಿವಾಸಿ ಮುನೀರ್ ಎಂಬಾತನ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಠಾಣೆ ಎಸ್.ಐ ರಾಧಾಕೃಷ್ಣನ್ ಅವರ ದುರಿನನ್ವಯ ಈ ಕೇಸು. ಗುರುವಾರ ಮಧ್ಯಾಹ್ನ ಮುನೀರ್ ತನ್ನ ಮೊಬೈಲ್‍ನಿಂದ ಪೊಲೀಸರ ಐಆರ್‍ಎಸ್ಸೆಸ್ ಸಂಖ್ಯೆಗೆ ಕರೆಮಾಡಿ, ಉಪ್ಪಳ ಕೆಎಸ್‍ಇಬಿ ಕಚೇರಿ ಎದುರು ವಾಹನಗಳ ಸಂಚಾರಕ್ಕೆ ತಡೆಯೊಡ್ಡುವ ರೀತಿಯಲ್ಲಿಕಾರನ್ನು ನಿಲ್ಲಿಸಲಾಗಿದ್ದು, ಸಂಚಾರಕ್ಕೆ ಭಾರೀ ಸಮಸ್ಯೆ ಉಂಟಾಗುತ್ತಿರುವುದಾಗಿ ಮುನೀರ್ ಕರೆಮಾಡಿ ತಿಳಿಸಿದ್ದನು. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಿಸಿದಾಗ ಈ ರೀತಿಯ ಕಾರು ನಿಲುಗಡೆಗೊಂಡಿಲ್ಲ ಅಲ್ಲದೆ ವಾಹನಗಳಿಗೆ ತಡೆಯುಂಟಾಗಿಲ್ಲ ಎಂಬ ಮಾಹಿತಿ ಲಭಿಸಿತ್ತು. ಇದು ಪೊಲೀಸರ ಹಾದಿ ತಪ್ಪಿಸುವ ಹಾಗೂ ಕರ್ತವ್ಯಕ್ಕೆ ತಡೆಯೊಡ್ಡುವ ಪ್ರಕರಣಕ್ಕೆಸಂಬಂಧಿಸಿ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries