ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದಲ್ಲಿ ಆಯಾ ಬ್ಲಾಕ್ ಯಾ ನಗರಸಭಾ ಚುನಾವಣಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಮತಯಂತ್ರಗಳನ್ನು ಆಯಾ ಸ್ಥಳಗಳಲ್ಲಿನ ಸ್ಟ್ರಾಂಗ್ ರೂಮ್‍ಗಳಲ್ಲಿ ಇಡಲಾಯಿತು.
ಕಾಸರಗೋಡು ಜಿಲ್ಲಾಧಿಕಾರಿಕಚೇರಿ ಹೊಂದಿರುವ ಸಿವಿಲ್ ಸ್ಟೇಶನ್‍ನಲ್ಲಿರುವ ರಾಜ್ಯ ಚುನಾವಣಾ ಆಯೋಗದ ಗೋದಾಮನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ತೆರೆದು ಮತಯಂತ್ರಗಳನ್ನು ಆಯಾ ಅಧಿಕಾರಿಗಳಿಗೆ ನೀಡಲಯಿತು. ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್, ಇವಿಎಂ ನೋಡಲ್ ಅಧಿಕಾರಿ ಹಾಗೂ ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್. ಲಾರೆನ್ಸ್, ಚುನಾವಣಾ ಕಿರಿಯ ಅಧೀಕ್ಷಕ ಎ. ರಾಜೀವ್, ಸ್ಥಳೀಯಾಡಳಿತ ಸಂಸ್ಥೆಗಳ ಉಪನಿರ್ದೇಶಕ ಕೆ.ವಿ. ಹರಿದಾಸ್, ಚುನಾವಣಾ ನೋಂದಣಿ ಅಧಿಕಾರಿಗಳು, ಪಂಚಾಯತ್ ಬ್ಲಾಕ್ ಪುರಸಭೆ ಕಾರ್ಯದರ್ಶಿಗಳು ಮತ್ತು ವಿವಿಧ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ ರಮೇಶ್, ಉಮ್ಮರ್ ಪಟಲಡ್ಕ ಉಪಸ್ಥಿತರಿದ್ದರು. ಬಿಗು ಪೊಲೀಸ್ ಬಂದೋಬಸ್ತ್‍ನೊಂದಿಗೆ ಗೋದಾಮು ತೆರೆಯುವ ಹಾಗೂ ಸ್ಟ್ರಾಂಗ್ ರೂಮಿಗೆ ಮತಯಂತ್ರಗಳನ್ನು ಸಥಳಾಂತರಿಸುವ ಪ್ರಕ್ರಿಯೆ ನಡೆಯಿತು.





