ಕಾಸರಗೋಡು: ಕಾಸರಗೋಡಿನ ಐ.ಸಿ.ಎ.ಆರ್.- ಸಿಪಿಸಿಆರ್.ಐ.ನಲ್ಲಿ "ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು" ಎಂಬ ವಿಷಯದ ಬಗ್ಗೆ ವಿಶ್ವ ತೆಂಗು ದಿನದಂಗವಾಗಿ ವಿಚಾರ ಸಂಕಿರಣವನ್ನು ನಿನ್ನೆ ಆಯೋಜಿಸಲಾಗಿತ್ತು.
ಕೇರಳ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಪಿ. ವಿ. ಸಿಂಧು ಮುಖ್ಯ ಅತಿಥಿಯಾಗಿದ್ದರು. ಹೆಡ್ ಕ್ರಾಪ್ ಪ್ರೊಡಕ್ಷನ್ ಡಾ. ಸುಬ್ರಹ್ಮಣ್ಯನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಮಣ್ಣಿನ ದಿನದ ಬಗ್ಗೆ ಪರಿಚಯಿಸಿದರು ಮತ್ತು ಮಣ್ಣಿನ ಆರೋಗ್ಯವು ಕೃಷಿಯಲ್ಲಿ ನೇರವಾಗಿ ಪರಿಣಾಮಕಾರಿಯಾಗಿದೆ ಮತ್ತು ಇದು ಮಣ್ಣಿನ ಆರೈಕೆಗೆ ಬಹಳ ಅವಶ್ಯಕವಾಗಿದೆ ಎಂದರು.
ಡಾ. ಪಿ. ವಿ. ಸಿಂಧು ಮಾತನಾಡಿ, ಮರಗಳನ್ನು ನೆಡುವ ಮೂಲಕ ಹಸಿರು ನಗರವನ್ನು ಯೋಜಿಸಲು ಒತ್ತಾಯಿಸಿದರು. ನಾವು ನಗರಗಳಲ್ಲಿ ಮಣ್ಣನ್ನು ರಕ್ಷಿಸಬೇಕು ಆಗ ಮಾತ್ರ ನಾವು ಜೀವ ವೈವಿಧ್ಯಗಳನ್ನು ಉಳಿಸಿಕೊಳ್ಳಬಹುದು ಎಂದರು.
ಪ್ರಧಾನ ವಿಜ್ಞಾನಿ ಡಾ. ರವಿ ಭಟ್ ಸ್ವಾಗತಿಸಿ, ವಿಜ್ಞಾನಿ ಡಾ. ಸೆಲ್ವಮಣಿ ವಂದಿಸಿದರು.
ಮಣ್ಣಿನ ದಿನದ ಭಾಗವಾಗಿ ರೈತರ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಚರ್ಚಿಸಲು ರೈತರು ಮತ್ತು ವಿಜ್ಞಾನಿಗಳ ಸಂವಾದವನ್ನು ಆಯೋಜಿಸಲಾಯಿತು. ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್‍ಗಳನ್ನು ವಿತರಿಸಲಾಯಿತು ಮತ್ತು ಫಲಿತಾಂಶಗಳ ಆಧಾರದ ಮೇಲೆ ಸೂಕ್ತ ಪರಿಹಾರ ಕ್ರಮಗಳನ್ನು ಸೂಚಿಸಲಾಯಿತು.
"ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು" ಎಂಬ ವಿಷಯದ ಬಗ್ಗೆ ಪೋಸ್ಟರ್ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು. ಮಣ್ಣಿನ ಮಾದರಿಯ ಸರಿಯಾದ ವಿಧಾನದ ಕುರಿತು ಪ್ರಾಯೋಗಿಕ ಪ್ರದರ್ಶನ ನಡೆಸಲಾಯಿತು.




