ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ವರದಿ ಇದನ್ನು ಪ್ರಕಟಿಸಿವೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರಗಳ ದತ್ತಾಂಶವನ್ನೇ ಮಾಹಿತಿ ಮೂಲವನ್ನಾಗಿ ಪರಿಗಣಿಸಿ ವಿಶ್ಲೇಷಣೆ ಮಾಡಲಾಗಿದೆ.
2014ರಲ್ಲಿ ₹ 1.65 ಕೋಟಿ ಇದ್ದ ಪ್ರಧಾನಿ ನರೇಂದ್ರ ಮೋದಿಯವರ ಒಟ್ಟು ಆಸ್ತಿ 2024ಕ್ಕೆ ₹ 3.02 ಕೋಟಿಗೆ ಏರಿಕೆಯಾಗಿದೆ. ₹ 2019ರಲ್ಲಿ ಅವರ ಆಸ್ತಿ ₹ 2.51 ಕೋಟಿ ಇತ್ತು.
ಪ್ರಧಾನಿ ಮೋದಿಯವರ ಅಫಿಡವಿಟ್ ಪ್ರಕಾರ ಅವರ ಬಳಿ ಯಾವುದೇ ಸ್ಥಿರಾಸ್ಥಿ ಅಥವಾ ಸ್ವಂತ ವಾಹನಗಳು ಇಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹ 2.86 ಕೋಟಿ ಠೇವಣಿ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ₹ 9 ಲಕ್ಷ ಇದೆ. ₹ 2.7 ಲಕ್ಷ ಮೌಲ್ಯದ ಚಿನ್ನದ ಉಂಗುರಗಳಿವೆ. ಅವರ ಷೇರುಗಳಲ್ಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಅಥವಾ ಬಾಂಡ್‌ಗಳಲ್ಲಿ ಯಾವುದೇ ಹೂಡಿಕೆ ಇಲ್ಲ.
ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರಧಾನಿ ಮೋದಿ ಅವರ ಆಸ್ತಿಯು 10 ವರ್ಷಗಳಲ್ಲಿ ₹1.26 ಕೋಟಿಯಷ್ಟು ಹೆಚ್ಚಳವಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ ಶೇ 82ರಷ್ಟು ಜಾಸ್ತಿಯಾಗಿದೆ.
ರಾಹುಲ್ ಗಾಂಧಿ ಆಸ್ತಿ
ಕಳೆದ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಮುಖಂಡ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಸ್ತಿ 10 ವರ್ಷಗಳಲ್ಲಿ ₹10.99 ಕೋಟಿಯಷ್ಟು ಜಾಸ್ತಿಯಾಗಿದೆ. ಶೇಕಡವಾರು ಲೆಕ್ಕದಲ್ಲಿ 117ರಷ್ಟು ಹೆಚ್ಚಾಗಿದೆ.
2014ರಲ್ಲಿ ಅವರ ಆಸ್ತಿ ₹ 9.40 ಕೋಟಿ, 2019ರಲ್ಲಿ ₹ 15.88 ಕೋಟಿ ಇದ್ದರೆ 2024ರಲ್ಲಿ ಅವರ ಆಸ್ತಿ ₹ 20.39 ಕೋಟಿ ಇತ್ತು.

