ಕಾಸರಗೋಡು: ವಿದ್ಯಾನಗರದ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲಾ 29ನೇ ವಾರ್ಷಿಕ ಕಾರ್ಯಕ್ರಮ ಜ. 11ರಂದು ಬೆಳಗ್ಗೆ 9.30ರಿಂದ ಕಾಸರಗೋಡು ಲಲಿತಕಲಾ ಸದನದಲ್ಲಿ ಜರುಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಶೀರ್ವಚನ ನಿಡುವರು. ನಂತರ ನಡೆಯುವ ಸಂಗೀತೋಪಾಸನಾ ಕಾರ್ಯಕ್ರಮದಲ್ಲಿ ವಯಲಿನ್‍ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ್ ಕೊವ್ವಲ್ ಕಣ್ಣನ್ ಕಾಞಂಗಾಡು, ವಿದ್ವಾನ್ ರಾಜೀವ್‍ಗೋಪಾಲ್ ವೆಳ್ಳಿಕ್ಕೋತ್, ವಿದ್ವಾನ್ ಶ್ರೀಧರ ಭಟ್ ಬಡಕ್ಕೆಕರೆ, ವಿದ್ವಾನ್ ಟಿ.ಕೆ ವಾಸುದೇವ ಕಾಞಂಗಾಡು ಸಹಕರಿಸುವರು.
ಸಂಜೆ ನಡೆಯುವ ಪಿಟೀಲುವಾದನ ಕಾರ್ಯಕ್ರಮದಲ್ಲಿ ವಿದ್ವಾನ್ ಕೆ.ಜೆ ದಿಲೀಪ್ ಅವರಿಂದ ಪಿಟೀಲುವಾದನ ನಡೆಯುವುದು. ವಿದ್ವಾನ್ ಬೆಂಗಳೂರು ಅರ್ಜುನ್‍ಕುಮಾರ್ ಮೃದಂಗ, ವಿದ್ವಾನ್ ವಯಪಳ್ಳಿ ಕೃಷ್ಣ ಕುಮಾರ್ ಘಟಂ ಹಾಗೂ ವಿದ್ವಾನ್ ಸುನಾದ್ ಆನೂರ್ ಕಂಜೀರಾದಲ್ಲಿ ಸಹಕರಿಸುವರು.


