ಕಾಸರಗೋಡು: ವಿಶೇಷ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಮೃತ ಪಟ್ಟವರ, ಸ್ಥಳಾಂತರಗೊಂಡವರು ಮತ್ತು ಪತ್ತೆಯಾಗದ ವ್ಯಕ್ತಿಗಳ ಪಟ್ಟಿ (ಎಎಸ್‍ಡಿ ಲಿಸ್ಟ್)ಯನ್ನು ಕನ್ನಡ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಮಂಜೇಶ್ವರ ಕ್ಷೇತ್ರದ ಬಹುತೇಕ ಮತದಾರರು ಮಲಯಾಳ ಭಾಷೆ ಅರಿಯದವರಾಗಿದ್ದಾರೆ.
ಎಎಸ್‍ಡಿ ಪಟ್ಟಿಯಲ್ಲಿ ಮಲಯಾಳದಲ್ಲಿರುವುದರಿಂದ ಇದರಲ್ಲಿ ತಮ್ಮ ಹೆಸರು ಪರಿಶೀಲಿಸಲಾಗುತ್ತಿಲ್ಲ. ಇದರಿಂದ ಬಹಳಷ್ಟು ಜನರಿಗೆ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಭಾಷಿಗರ ಮತದಾನದ ಹಕ್ಕನ್ನು ಕಳೆದುಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಎಎಸ್‍ಡಿ ಪಟ್ಟಿಯನ್ನು ಮಲಯಾಳದೊಂದಿಗೆ ಕನ್ನಡದಲ್ಲೂ ಪರಿಷ್ಕರಿಸಿ ನೀಡಬೇಕು ಎಂದು ಎಂ.ಎಲ್ ಅಶ್ವಿನಿ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

