ಕಾಸರಗೋಡು: ಮೊಗ್ರಾಲ್ ಪುತ್ತೂರು ಪುರಾತನ ಹಾಗೂ ಕಾರಣಿಕ ಕ್ಷೇತ್ರ ದೇಶಮಂಗಲ ಶ್ರೀ ಶಂಕರನಾರಾಯಣ ಕುಟ್ಟಿಚಾತ ದೇವಸ್ಥಾನದ ಪ್ರತಿಷ್ಠಾ ದಿನಾಚರಣೆ ಜ. 7 ಹಾಗೂ ವಾರ್ಷಿಕ ಮಹೋತ್ಸವ ಜ. 14ರಂದು ನಡೆಯಲಿದೆ.
ಪ್ರತಿಷ್ಠಾ ದಿನಾಚರಣೆಯ ಅಂಗವಾಗಿ ಜ.7ರಂದು ಬೆಳಗ್ಗೆ ಗಣಪತಿ ಹವನ, ನವಕಾಭಿಷೇಕ, ಭಜನೆ, ಸಂಜೆ ದೀಪ ಪ್ರತಿಷ್ಠೆಯೊಂದಿಗೆ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯುವುದು. ರಾತ್ರಿ 8.30ಕ್ಕೆ ವಿಶೇಷ ಕಾರ್ತಿಕ ಪೂಜೆ, ಮಹಾಪೂಜೆ ನಡೆಯುವುದು.
ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಮತ್ತು ನೇಮೋತ್ಸವ ಜ. 14ರಂದು ಮಕರ ಸಂಕ್ರಮಣದಂದು ನಡೆಯಲಿದೆ. ವಾರ್ಷಿಕ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹವನ, ನವಕಾಭಿಷೇಕ, ಭಜನೆ ನಡೆಯುವುದು. ಸಂಜೆ 6ರಿಂದ ಶ್ರೀ ಕುಟ್ಟಿಚಾತ ದೈವದ ನೇಮೋತ್ಸವ, ರಾತ್ರಿ 9ಕ್ಕೆ ಶ್ರೀ ಪಂಜರ್ಲಿ ದೈವ ಹಾಗೂ ಶ್ರೀ ಧೂಮಾವತಿ ದೈವಗಳ ನೇಮೋತ್ಸವಗಳು ನಡೆಯಲಿವೆ.


