ಪೆರ್ಲ: ಉಕ್ಕಿನಡ್ಕ ಸನಿಹದ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬೃಹತ್ ಕರಸೇವೆ ಕಾರ್ಯಕ್ರಮ ಜ. 11ರಂದುಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಜರುಗಲಿದೆ. ದೇವಸ್ಥಾನದ ವಠಾರದಲ್ಲಿ ನಡೆಯುವ ಈ ಮಹತ್ಕಾರ್ಯದಲ್ಲಿ ಊರ, ಪರವೂರ ಭಕ್ತಾದಿಗಳು ಭಾಗವಹಿಸುವಂತೆ ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

