ಪತ್ತನಂತಿಟ್ಟ: ಶಬರಿಮಲೆ ಮಕರಜ್ಯೋತಿ ಉತ್ಸವ ಜ. 14ರಂದು ನಡೆಯಲಿದ್ದು, ಇದಕ್ಕಾಗಿ ಸಿದ್ಧತಾ ಕಾರ್ಯ ಆರಂಭಗೊಂಡಿದೆ. ಶಬರಿಮಲೆಯಲ್ಲಿ ಭಕ್ತಾದಿಗಳ ದಟ್ಟಣೆ ಹೆಚ್ಚಾಗಿದ್ದು, ಜನದಟ್ಟಣೆ ನಿಯಂತ್ರಿಸಲು ಮತ್ತಷ್ಟುಪೊಲೀಸರನ್ನು ನಿಯೋಜಿಸಲಾಗಿದೆ.
ಶಬರಿಮಲೆ ಸನ್ನಿದಾನ ವ್ಯಾಪ್ತಿಯಲ್ಲೇ 1600ಮಂದಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮಕರಜ್ಯೋತಿ ತೀರ್ಥಾಟನೆಎ ಋತು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಶಬರಿಮಲೆಗೆ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನವರಿ 12ರಿಂದ ಈ ಸಂಖ್ಯೆ ಮತ್ತಷ್ಟುಹೆಚ್ಚಾಗಲಿದ್ದು, ದಟ್ಟಣೆ ನಿವಾರಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ. ಜ. 14ರಂದು ಸಂಜೆ 6.40ಕ್ಕೆ ಪೊನ್ನಂಬಲ ಬೆಟ್ಟದಲ್ಲಿ ಮಕರಜ್ಯೋತಿ ದರ್ಶನವಾಗಲಿದೆ. ದೇವಸ್ಥಾನದ ತಂತ್ರಿವರ್ಯ ಕಂಠರರ್ ಮಹೇಶ್‍ಮನೋಹರ್ ಹಾಗೂ ಮುಖ್ಯ ಅರ್ಚಕ ಇ.ಡಿ ಪ್ರಸಾದ್ ನಂಬೂದಿರಿ ಅವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ವಿಗ್ರಹಕ್ಕೆ ಪವಿತ್ರಾಭರಣ ತೊಡಿಸಿ ಮಕರಮಾಸ ಪೂಜೆ ನಡೆಯುವ ಮಧ್ಯೆ ದಿವ್ಯಜ್ಯೋತಿಯ ದರ್ಶನವಾಗಲಿದೆ.


