ಕಾಸರಗೋಡು: ಆರೋಗ್ಯ ವಲಯದಲ್ಲಿಅತ್ಯಂತ ಹಿಂದುಳಿದಿರುವ ಕಾಸರಗೋಡು ಜಿಲ್ಲೆಗೆ ಏಮ್ಸ್ ಮಂಜೂರುಗೊಳಿಸುವಂತೆ ಕಾಸರಗೋಡು ಜನಪರ ಒಕ್ಕೂಟ ಹೋರಾಟ ಸಮಿತಿ ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರನ್ನುಮನವಿ ಮೂಲಕ ಆಗ್ರಹಿಸಿದೆ.
ಆರೋಗ್ಯ ಕ್ಷೇತ್ರದ ಹಿಂದುಳಿದಿರುವಿಕೆಯಿಂದ ಬಳಲುತ್ತಿರುವ, ಎಂಡೋಸಲ್ಫಾನ್ ಸಂತ್ರಸ್ತರು ಸೇರಿದಂತೆ ಸಾವಿರಾರು ರೋಗಿಗಳಿಗೆ ಅಗತ್ಯ ಚಿಕಿತ್ಸಾ ಸೌಲಭ್ಯವಿಲ್ಲದ ಕಾಸರಗೋಡಿಗೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ(ಎಐಐಎಂಎಸ್)ಸಂಸ್ಥೆ ಮಂಜೂರುಗೊಳಿಸುವುದು ಅನಿವಾರ್ಯವಾಗಿದೆ. ಆರೋಗ್ಯ ವಲಯದಲ್ಲಿ ಉನ್ನತ ಸೌಲಭ್ಯವಿಲ್ಲದ ಕಾಸರಗೋಡು ಜಿಲ್ಲೆಯ ಜನತೆಯ ಆರೋಗ್ಯ ರಕ್ಷಣೆಗಾಗಿ, ಕೇಂದ್ರವು ಕೇರಳಕ್ಕೆ ಮಂಜೂರು ಮಾಡಿದ ಏಮ್ಸ್ ಸಂಸ್ಥೆಯನ್ನು ಕಾಸರಗೋಡು ಜಿಲ್ಲೆಗೆ ಮಂಜೂರಾಗಿ ಲಭಿಸುವಲ್ಲಿ ಸರ್ಕರಕ್ಕೆ ಅಗತ್ಯ ಶಿಫಾರಸು ಮಾಡುವಂತೆ ಹೋರಾಟ ಸಮಿತಿ ಅಧ್ಯಕ್ಷ ಡಾ.ಖಾದರ್ ಮಾಙËಡ್ ಅವರು ಕೇರಳ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಮೂಲಕ ಒತ್ತಾಯಿಸಿದ್ದಾರೆ.
ಒಕ್ಕೂಟ ಅಧ್ಯಕ್ಷ ಗಣೇಶ್ ಅರಮಂಗಾನಂ, ಪ್ರಧಾನ ಕಾರ್ಯದರ್ಶಿ ಮುರಳೀಧರನ್ ಪಡನ್ನಕ್ಕಾಡ್, ಕೋಶಾಧಿಕಾರಿ ಸಲೀಂ ಸಂದೇಶ್ ಚೌಕಿ, ಕಾರ್ಯದರ್ಶಿ ಸಿಸ್ಟರ್ ಜಯಾ ಆಂಟ್ರೋ ಮಂಗಲತ್, ಹೋರಾಟ ಸಮಿತಿ ಕೋಶಾಧಿಕಾರಿ ಎ.ಹಮೀದ್ ಹಾಜಿ ಮತ್ತು ಅಶೋಕ್ ಕುಮಾರ್ ಜತೆಗಿದ್ದರು. ಬಿ ನಿರೂಪಕರಲ್ಲಿ ಉಪಸ್ಥಿತರಿದ್ದರು.
ಈ ವಿಷಯದ ಬಗ್ಗೆ ಅಧ್ಯಯನ ನಡೆಸಿ ಅಗತ್ಯ ಸಹಕಾರ ನೀಡುವುದಾಗಿ ರಜ್ಯಪಾಲರು ಕಾಸರಗೋಡು ಜನಪರ ಒಕ್ಕೂಟ ಪದಾಧಿಕಾರಿಗಳಿಗೆ ಭರವಸೆ ನೀಡಿದರು.


