ಕಾಸರಗೋಡು: ಜಿಲ್ಲಾ ಪಂಚಾಯತ್ ಹಣಕಾಸು ಸ್ಥಾಯಿ ಸಮಿತಿಯ ಮಹಿಳಾ ಸದಸ್ಯೆಯಾಗಿ 15ನೇ ಚೆಂಗಳ ಡಿವಿಶನ್‍ನ ಜಸ್ನಾ ಮನಾಫ್ ಆಯ್ಕೆಯಾಗಿದ್ದಾರೆ. ಹಣಕಾಸು ಸ್ಥಾಯಿ ಸಮಿತಿಗೆ ಯಾವುದೇ ನಾಮನಿರ್ದೇಶನವಿಲ್ಲದ ಕಾರಣ, ಹಣಕಾಸು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿತ್ತು.
ಹಣಕಾಸು ಸ್ಥಾಯಿ ಸಮಿತಿಯಲ್ಲಿ ಸಾಮಾನ್ಯ ವರ್ಗದ ಸದಸ್ಯರಾಗಿ 14ನೇ ಉದುಮ ಡಿವಶನ್‍ನ ಸುಕುಮಾರಿ ಶ್ರೀಧರನ್, 3ನೇ ಬದಿಯಡ್ಕ ಡಿವಿಶನ್‍ನ ರಾಮಪ್ಪ ಮಂಜೇಶ್ವರ ಆಯ್ಕೆಯಾದರು. 16ನೇ ಸಿವಿಲ್ ಸಟೇಶನ್ ಡಿವಿಶನ್‍ನ ಪಿ.ಬಿ. ಶಫೀಕ್, 18ನೇ ಮಂಜೇಶ್ವರ ಡಿವಿಶನ್‍ನ ಇರ್ಫಾನಾ ಇಕ್ಬಾಲ್ ಮತ್ತು 17ನೇ ಕುಂಬಳೆ ಡಿವಿಶನ್‍ನ ಅಜೀಜ್ ಕಳತ್ತೂರ್ ಅವರನ್ನು ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿಯ ಸಾಮಾನ್ಯ ವರ್ಗದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಲೋಕೋಪಯೋಗಿ ಸ್ಥಾಯಿ ಸಮಿತಿಯ ಸಾಮಾನ್ಯ ವರ್ಗದ ಸದಸ್ಯರಾಗಿ 2ನೇ ಪುತ್ತಿಗೆ ಡಿವಿಶನ್‍ನ ಜೆ.ಎಸ್. ಸೋಮಶೇಖರ ಮತ್ತು8ನೇ ಕಯ್ಯೂರು ಡಿವಿಶನ್‍ನ ಕೆ. ಕೃಷ್ಣನ್ ಓಕ್ಲಾವ್ ಆಯ್ಕೆಯಾದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಸಾಮಾನ್ಯ ವರ್ಗದ ಸದಸ್ಯರಾಗಿ ಒಂದನೇ ವರ್ಕಾಡಿ ಡಿವಿಶನ್‍ನ ಅಲಿ ಹರ್ಷದ್ ವಕ್ರ್ಕಾಡಿ ಮತ್ತು 9ನೇ ಪಿಲಿಕ್ಕೋಡ್ ಡಿವಶನ್‍ನ ಎಂ. ಮನು ಅವರನ್ನು ಆಯ್ಕೆ ಮಾಡಲಾಯಿತು.ಕಲ್ಯಾಣ ಸ್ಥಾಯಿ ಸಮಿತಿಯ ಸಾಮಾನ್ಯ ವರ್ಗದ ಸದಸ್ಯರಾಗಿ 11ನೇ ಮಡಿಕೈ ಡಿವಿಶನ್‍ನ ಕೆ. ಸಬೀಶ್ ಮತ್ತು 7ನೇ ಚಿತ್ತಾರಿಕಲ್ ಡಿವಿಶನ್‍ನ ಬಿನ್ಸಿ ಜೈನ್ ಅವರನ್ನು ಆಯ್ಕೆ ಮಡಲಾಯಿತು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯು ಮಹಿಳಾ ಸದಸ್ಯರನ್ನಾಗಿ ಡಾ. ಸೆರೆನಾ ಸಲಾಂ ಸಲಾಂ (10ನೇ ವಿಭಾಗ ಚೆರುವತ್ತೂರು) ಅವರನ್ನು ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಗೆ ಹಗೂ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿಗೆ ಟಿ.ವಿ.ರಾಧಿಕಾ (13ನೇ ವಿಭಾಗ ಬೇಕಲ) ಆಯ್ಕೆ ಮಾಡಲಾಗಿತ್ತು. ರೀನಾ ಥಾಮಸ್ (6ನೇ ವಿಭಾಗ ಕಲ್ಲಾರ್) ಕಲ್ಯಾಣ ವ್ಯವಹಾರಗಳ ಸ್ಥಾಯಿ ಸಮಿತಿಗೆ ಹಾಗೂ ಲೋಕೋಪಯೋಗಿ ಸ್ಥಾಯಿ ಸಮಿತಿಗೆ ಒ. ವತ್ಸಲಾ (4ನೇ ವಿಭಾಗ ದೇಲಂಬಾಡಿ) ಅವರನ್ನು ಆಯ್ಕೆ ಮಾಡಲಾಗಿತ್ತು.

