ಮಂಜೇಶ್ವರ: ಎಡರಂಗ 3 ನೇ ಅವಧಿಯ ಅಭಿವೃದ್ಧಿಯ ಮುನ್ನಡೆ ಎಂಬ ಘೋಷಣೆಯೊಂದಿಗೆ ರಾಜ್ಯ ಉತ್ತರ ವಲಯ ಜಾಥಾ ಫೆಬ್ರವರಿ 1 ರಂದು ಕುಂಬಳೆಯಿಂದ ಚಾಲನೆಯಾಗಲಿದೆ. ಕಳೆದ ಹತ್ತು ವರ್ಷ ಕೇರಳವು ಅಭಿವೃದ್ಧಿಯ ಪಥದ ಮಾರುತದೊಂದಿಗೆ ಮುಂದುವರಿಯುತ್ತಿದ್ದು ಇದರ ಮುಂದುವರಿಕೆಗೆ ಎಡರಂಗ ಇನ್ನೊಮ್ಮೆ ಅಧಿಕಾರಕ್ಕೇರಬೇಕಾಗಿದೆ. ಕೋಮು ಸಂಘರ್ಷವಿಲ್ಲದ ನೆಮ್ಮದಿಯ ನಾಳೆಗಾಗಿ ವಿದ್ಯಾವಂತ ಆರೋಗ್ಯವಂತ ಕೇರಳಕ್ಕೆ ಎಡರಂಗ ಅಧಿಕಾರಕ್ಕೇರಬೇಕಾಗಿದೆ. ಎಡರಂಗದ ರಾಜ್ಯ ಸಮಿತಿಯ ನೇತೃತ್ವದ ಉತ್ತರ ವಲಯ ಜಾಥವು ಫೆಬ್ರವರಿ ಒಂದರಂದು ಇತಿಹಾಸ ಪ್ರಸಿದ್ಧ ಕಣಿಪುರದ ಮಣ್ಣಿನಿಂದ ಉದ್ಘಾಟನೆಗೊಳ್ಳಲಿದ್ದು ಇದರ ಯಶಸ್ವಿಗೆ ಬೇಕಾದ ಸಿದ್ಧತೆ ಸಮಿತಿ ಸಭೆ ಬುಧವಾರ ಕುಂಬಳೆ ಪೈ ಹಾಲ್ ಜರಗಿದ್ದು ಎಡರಂಗ ಕಾರ್ಯಕರ್ತರು ನೇತಾರರು ಎಡರಂಗ ಬೆಂಬಲಿಗರು ಭಾಗವಹಿಸಬೇಕೆಂದು ಎಡರಂಗ ಮಂಜೇಶ್ವರ ಮಂಡಲ ಸಮಿತಿ ಸಭೆ ವಿನಂತಿಸಿದೆ. ಆರಿಕ್ಕಾಡಿಯಲ್ಲಿ ಅನ್ಯಾಯವಾಗಿ ರಾ.ಹೆದ್ದಾರಿ ಅಥೋರಿಟಿಯ ನೇತೃತ್ವದಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಖಂಡನಾರ್ಹವಾಗಿದೆ. ನ್ಯಾಯಾಲಯ ತೀರ್ಮಾನ ಉಲ್ಲಂಘನೆಯಾಗಿದೆ ಕೇಂದ್ರ ಸರ್ಕಾರ ನಡೆಸುತ್ತಿರುವುದು ಎಂದು ಸಭೆಯು ಖಂಡಿಸಿತು. ಸಭೆಯಲ್ಲಿ ಡಾ. ಕೆ.ಎ. ಖಾದರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್ ಜಯಾನಂದ ವರದಿ ಮಂಡಿಸಿದರು. ರಾಮಕೃಷ್ಣ ಕಡಂಬಾರ್, ತಾಜುದ್ದೀನ್, ಸಿ.ಎ. ಸುಬೈರ್ ಮಾತನಾಡಿದರು.

