ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಸಂಘದ ಸದಸ್ಯರಿಗಾಗಿ ಸ್ವಉದ್ಯೋಗ ಕೌಶಲ್ಯ ಅಭಿವೃದ್ಧಿ ತರಬೇತಿ ಆಯೋಜಿಸಲಾಯಿತು. ಕಾಸರಗೋಡು ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣಹೊಳ್ಳ ಸಮಾರಂಭ ಉದ್ಘಾಟಿಸಿದರು. ಯೋಜನೆ ಕೇಂದ್ರ ಸಮಿತಿಯ ಅಧ್ಯಕ್ಷ ಜ್ಞಾನೇಶ್ವರ ಆಚಾರ್ಯ ಅದ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಿವೃತ್ತ ಜಿಲ್ಲಾ ಕೈಗಾರಿಕಾ ಕೇಂದ್ರ ವಿಸ್ತರಣಾ ಅಧಿಕಾರಿ ಅಶೋಕ. ಒ. ಅವರು ತರಬೇತಿಯ ಉದ್ದೇಶದ ಬಗ್ಗೆ ಮಾಹಿತಿ ನಿಡಿದರು. ಕೇಂದ್ರ ಕಚೇರಿ ಧರ್ಮಸ್ಥಳ ಯೋಜನಾಧಿಕಾರಿ ಅನುಷಾ, ಜನಾರ್ದನ ಉಪಸ್ಥಿತರಿದ್ದರು. ತಿಳಿಸಿದರು. ಕಾಸರಗೋಡು ತಾಲೂಕು ಯೋಜನಾಧಿಕಾರಿ ದಿನೇಶ್ ಬಿ ಸ್ವಾಗತಿಸಿದರು. ಕಾಸರಗೋಡು ವಲಯದ ಮೇಲ್ವಿಚಾರಕ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ವಂದಿಸಿದರು.


