ಕಾಸರಗೋಡು: ಕೇರಳ ರಾಜ್ಯ ಪಿಂಚಣಿದಾರರ ಸಂಘದ ರಾಜ್ಯ ಸಮ್ಮೇಳನ ಮಾರ್ಚ್ 6 ಮತ್ತು 7ರಂದು ನಡೆಯಲಿದ್ದು, ಸಂಘಟನಾ ಸಮಿತಿ ರಚನಾ ಸಭೆ ಕಾಸರಗೋಡು ಟೌನ್ ಬ್ಯಾಂಕ್ ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಿತು.
ಸಂಘಟನೆ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ, ವಕೀಲ ಸಿ. ಜಯಭಾನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಬಿ. ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ಐಎಎಸ್ ಮತ್ತು ಪ್ರಧಾನ ಸಂಚಾಲಕರಾಗಿ ಕುಞÂರಾಮನ್ ಕೇಳೋತ್ ಕೇಳೋತ್ ಹಾಗೂ 101 ಮಂದಿ ಸದಸ್ಯರ ಸಂಘಟನಾ ಸಮಿತಿಯನ್ನು ರಚಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಜಯಭಾನು ಸಿ, ರಾಜ್ಯ ಉಪಾಧ್ಯಕ್ಷ ಸದಾನಂದನ್ ಎಂಕೆ, ರಾಜ್ಯ ಕಾರ್ಯದರ್ಶಿ ವಿನೋದ್ ಕೆ.ಎನ್, ರಾಜ್ಯ ಉಪಾಧ್ಯಕ್ಷ ಮುತ್ತು ಕೃಷ್ಣನ್ ಕೆ, ರಾಜ್ಯ ಸಮಿತಿ ಸದಸ್ಯ ಬಿ. ಈಶ್ವರಾವ್, ನಗರಸಭಾ ಸದಸ್ಯರಾದ ಶ್ರುತಿ ಕೆ.ಎಸ್., ದಿವ್ಯಾ ಸಂದೀಪ್, ಸಹಕಾರ ಭಾರತಿಯ ವೇಣುಗೋಪಾಲ್, ಎನ್.ಜಿ.ಓ. ಸಂಘದ ಪೀಠಾಂಬರನ್ ಪಿ, ಕೆಎಸ್‍ಟಿಸಿ ನೌಕರರ ಸಂಘದ ಹರೀಶ್ ಕುಮಾರ್ ಸಿಎಚ್ ಮತ್ತು ವಿಶ್ವ ಹಿಂದೂ ಪರಿಷತ್ತಿನ ಎ.ಟಿ ನಾಯ್ಕ್ ಉಪಸ್ಥಿತರಿದ್ದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕುಞÂರಾಮನ್ ಕೇಳೋತ್ ಸ್ವಾಗತಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಪಿ.ಕೆ. ಕುಞಂಬು ಮಾಸ್ಟರ್ ವಂದಿಸಿದರು.

