ಮಂಜೇಶ್ವರ: ಖ್ಯಾತ ಚುಟುಕು ಸಾಹಿತಿ, ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಸು.ಒಡ್ಡಂಬೆಟ್ಟು ಅವರ ನ್ಯಾನೋ ಕತೆಗಳ ಸಂಕಲನ ಕೋಲ್ಮಿಂಚು ಜ. 25 ರಂದು ಭಾನುವಾರ ಕದ್ರಿ ದೇವಾಲಯದ ಅಭಿಷೇಕ ಕಲಾಮಂದಿರದಲ್ಲಿ ನಡೆಯುವ ಸಾಹಿತ್ಯ ವೈಭವ 20026 ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸುವರು. ಇದೇ ಸಂದರ್ಭದಲ್ಲಿ ಚುಸಾಪ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರ ಚುಟುಕು ಕಾಮಿನಿ ಕಾವ್ಯಸಂಕಲನವನ್ನು ಡಾ.ಎ.ಜನಾರ್ಧನ ಶೆಟ್ಟಿಯವರು ಬಿಡುಗಡೆಗೊಳಿಸಲಿರುವರು. ಕಾರ್ಯಕ್ರಮವನ್ನು ಎಸ್ ಗಣೇಶ್ ರಾವ್ ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ಸದಾಶಿವ ಉಳ್ಳಾಲ್, ಗೋಪಾಲಕೃಷ್ಣ ಶೆಟ್ಟಿ, ಡಾ ಎಂ.ಜಗದೀಶ್ ಶೆಟ್ಟಿ. ಪುಷ್ಪಲತಾ ಮತ್ತು ನಾರಾಯಣಯ್ಯ ಮೂಳೂರು ಅತಿಥಿಗಳಾಗಿ ಉಪಸ್ಥಿತರಿರುವರು. ಚುಸಾಪ ಸಂಚಾಲಕ ಡಾ.ಎಂ.ಜಿ.ಆರ್ ಅರಸ್ ಅವರು ಅಧ್ಯಕ್ಷತೆ ವಹಿಸಲಿರುವರು.

-HA%20SU%20VODDAMBETTU-side.jpg)
