ಮುಳ್ಳೇರಿಯ: ಎಡಪರಂಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮ ಎಲ್.ಪಿ.ಎಸ್.ಟಿ. ವಿಭಾಗದಲ್ಲಿ ಎರಡು ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ ನೇಮಕಾತಿಗೆ ಜ.27 ರಂದು ಮಂಗಳವಾರ ಬೆಳಿಗ್ಗೆ 10 ರಿಂದ ಶಾಲಾ ಕಾರ್ಯಾಲಯದಲ್ಲಿ ಸಂದರ್ಶನ ನಡೆಸಲಾಗುತ್ತದೆ. ಅರ್ಹ ಉದ್ಯೋಗಾರ್ಥಿಗಳು ಅಸಲಿ ಪ್ರಮಾಣ ಪತ್ರಗಳೊಂದಿಗೆ ಕ್ಲಪ್ತ ಸಮಯಕ್ಕೆ ಸಂದರ್ಶನಕ್ಕೆ ಹಾಜರಾಗಬಹುದೆಂದು ಶಾಲಾ ಅಧಿಕೃತರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

