ಕುಂಬಳೆ: ಸವಾಲುಗಳನ್ನು ಮೆಟ್ಟಿನಿಂತು ಇತಿಹಾಸ ಬರೆದ ಚರಿತ್ರೆ ಹಿಂದುವಿನದು ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅಭಿಪ್ರಾಯಪಟ್ಟಿದ್ದಾರೆ.
ಸೀತಾಂಗೋಳಿ ಶ್ರೀ ದೇವಿ ಭಜನಾಮಂದಿರದಲ್ಲಿ ನಡೆದ ಪುತ್ತಿಗೆ ಪಂಚಾಯತಿ ಹಿಂದೂ ಏಕತಾ ಸಮ್ಮೇಳನದ ಸ್ವಾಗತ ಸಮಿತಿ ರೂಪೀಕರಣ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ರಾಮಜನ್ಮಭೂಮಿಗಾಗಿ ನಡೆದ ಹೋರಾಟವನ್ನು ವಿರೋಧಿಸಿದವರು, ಹತ್ತಿಕ್ಕಲು ನೋಡಿದವರೂ ಈಗ ರಾಮ ಮಂದಿರ ನೋಡಲು ಹಾತೊರೆಯುತ್ತಿದ್ದಾರೆ ಎಂದವರು ಬೊಟ್ಟು ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಹಲವು ಸವಾಲುಗಳನ್ನು, ಸಂಘರ್ಷಗಳನ್ನು ಎದುರಿಸಿ ಗೆದ್ದು ಎದ್ದು ನಿಂತ ಸುವರ್ಣ ಇತಿಹಾಸವಿದು. ನೂರಾರು ಮಂದಿ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದ ಫಲವಾಗಿ ಇಂದು ಸಂಘವು ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎಂದವರು ಹೇಳಿದರು.
ಹಿಂದು ಏಕತಾ ಸಮ್ಮೇಳನದ ಸಂಯೋಜಕ ಕೃಷ್ಣಪ್ರಸಾದ್ ಮುಗು ಉಪಸ್ಥಿತರಿದ್ದರು. ಅವಿನಾಶ್ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಘ್ನೇಶ್ವರ ಮಾಸ್ತರ್, ಅಶೋಕ್ ಮಾಸ್ತರ್ ಬಾಡೂರು, ಗ್ರಾಮೀಣ ಬ್ಯಾಂಕಿನ ನಿವೃತ್ತ ವಲಯ ಪ್ರಬಂಧಕ ದಾಮೋದರ ದೇಲಂಪಾಡಿ, ಜಯಂತ ಪಾಟಾಳಿ, ಪಂ. ಸದಸ್ಯರಾದ ಲಕ್ಷ್ಮೀ ಭಟ್ ಸೂರಂಬೈಲು, ಸತೀಶ್, ಹರೀಶ್ ಸಿದ್ದಿಬೈಲು ಸಹಿತ ಹಲವು ಗಣ್ಯರು ಪಾಲ್ಗೊಂಡರು. ಬಳಿಕ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಮಾ. 8 ರಂದು ಹಿಂದು ಏಕತಾ ಸಮ್ಮೇಳನ ಜರಗಲಿದೆ.

.jpg)
