HEALTH TIPS

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ-32 ನೇ ಸ್ವದೇಶಿ ವಿಜ್ಞಾನ ಕಾಂಗ್ರೆಸ್ ಸಮಾರೋಪ

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಮೂರು ದಿವಸಗಳ ಕಾಲ ನಡೆದ 32 ನೇ ಸ್ವದೇಶಿ ವಿಜ್ಞಾನ ಕಾಂಗ್ರೆಸ್‍ನ ಸಮಾರೋಪ ಸಮರಂಭ ನಡೆಯಿತು. ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅಶೋಕ್ ಎಸ್. ಆಲೂರ್ ಸಮಾರೋಪ ಭಾಷಣ ಮಾಡಿದರು.  ತರಗತಿಯ ಉಪನ್ಯಾಸಗಳ ಜೊತೆಗೆ, ಉದ್ಯಮಶೀಲತಾ ಶಿಕ್ಷಣವು ಸಂಶೋಧನೆ, ನಾವೀನ್ಯತೆ ಮತ್ತು ಕ್ಷೇತ್ರಕಾರ್ಯಕ್ಕೆ ಒತ್ತು ನೀಡುವ ಮೂಲಕ ಪ್ರಸಕ್ತ ಕಲಿಕಾ ವಿಧಾನವನ್ನು ಬದಲಾಯಿಸುವುದು ಅತ್ಯಗತ್ಯ ಎಂದು ತಿಳಿಸಿದರು.  

ಪೆರಿಯಾ ಕ್ಯಾಂಪಸ್‍ನಲ್ಲಿ ಮೂವ್‍ಮೆಂಟ್-ಕೇರಳ ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ಸಮ್ಮೇಳನದಲ್ಲಿ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಎಂಬ ವಿಷಯದ ಕುರಿತು ವಿವಿಧ ಭಾಷಣಕಾರರು ತರಗತಿ ನಡೆಸಿದರು. ವಿವಿಧ ವಲಯಗಳಾಗಿ ವಿಂಗಡಿಸಿ  ಚರ್ಚೆ, ವಿಚಾರಗೋಷ್ಠಿ ಆಯೋಜಿಸಲಗಿತ್ತು.  ಆರು ಸ್ಥಳಗಳಲ್ಲಿ ನಡೆದ ವಿವಿಧ ಗೋಷ್ಠಿಗಳಲ್ಲಿ 300ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಸಂಶೋಧಕರು ಭಾಗವಹಿಸಿದ್ದರು. 238 ಪ್ರಬಂಧ ಮತ್ತು ಪೆÇೀಸ್ಟರ್ ಪ್ರಸ್ತುತಿ ನಡೆಸಲಾಯಿತು.

ಪ್ರತಿ ಗೋಷ್ಠಿಯಲ್ಲೂ ಅತ್ಯುತ್ತಮ ಪ್ರಬಂಧಕ್ಕಾಗಿ ಯುವ ವಿಜ್ಞಾನ ಪ್ರಶಸ್ತಿ ಮತ್ತು ಅತ್ಯುತ್ತಮ ಮೌಖಿಕ ಪ್ರಸ್ತುತಿಗಳು ಮತ್ತು ಪೆÇೀಸ್ಟರ್ ಪ್ರಸ್ತುತಿಗಳಿಗಾಗಿ ಪ್ರಶಸ್ತಿಗಳನ್ನು ಸಹ ವಿತರಿಸಲಾಯಿತು. ಕೇರಳ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಸಿದ್ದು ಪಿ.ಅಲ್ಗೂರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ವಿಜ್ಞಾನ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಪೆÇ್ರ.ರಾಜೇಂದ್ರ ಪಿಲಾಂಗಟ್ಟೆ ವರದಿ ಮಂಡಿಸಿದರು.ಪ್ರಭಾರ ಕುಲಸಚಿವ ಡಾ. ಆರ್. ಜಯಪ್ರಕಾಶ್, ಡೀನ್ ಅಕಾಡೆಮಿಕ್ ಪೆÇ್ರ. ಜೋಸೆಫ್ ಕೊಯಿಪಲ್ಲಿ, ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್, ಹೈದರಾಬಾದ್ ವಿಶ್ವವಿದ್ಯಾಲಯದ ಮಾಜಿ ಉಪಉಪಕುಲಪತಿ ಪೆÇ್ರ. ಪಿ. ಅಪ್ಪಾ ರಾವ್, ಧಾರವಾಡ ಐಐಟಿ ಡೀನ್ ಪೆÇ್ರ. ಎಸ್.ಎಂ. ಶಿವಪ್ರಸಾದ್, ಕೇರಳ ಅಕಾಡೆಮಿ ಆಫ್ ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಡೀನ್ ಅಕಾಡೆಮಿಕ್ ಪೆÇ್ರ. ಎನ್.ಎಚ್. ಅಯಾಚಿತ್, ವಿಜ್ಞಾನ ವಿಭಾಗದ ಅಧ್ಯಕ್ಷ ಪೆÇ್ರ.ಜಿ.ಎಂ. ನಾಯರ್, ಸ್ವದೇಶಿ ವಿಜ್ಞಾನ ವಿಭಾಗದ ಮಾಜಿ ಅಧ್ಯಕ್ಷ ಡಾ.ಕೆ.ಮುರಳೀಧರನ್, ವಿಜ್ಞಾನ ಕಾಂಗ್ರೆಸ್ ಕಾರ್ಯದರ್ಶಿ ಡಾ.ಜಾಸ್ಮಿನ್ ಎಂ.ಷಾ ಉಪಸ್ಥಿತರಿದ್ದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries