ಕಾಸರಗೋಡು: ರಾಜಸ್ಥಾನದ ಇವಿಎಂ ನೋಡಲ್ ಅಧಿಕಾರಿ ಸುರೇಶ್ ಚಂದ್ರ ಐಎಎಸ್ ಜಿಲ್ಲೆಗೆ ಮಭೇಟಿ ನೀಡಿ ಇವಿಎಂ ತಪಾಸಣಾ ಕಾರ್ಯಗಳವಲೋಕನ ನಡೆಸಿದರು. 2026 ರ ಕೇರಳ ವಿಧಾನಸಭಾ ಚುನಾವಣೆಗೆ ಅಗತ್ಯವಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ ಪ್ರಾಥಮಿಕ ಪರಿಶೀಲನೆ ನಡೆಯುತ್ತಿರುವ ಸಭಾಂಗಣಕ್ಕೆ ಭೇಟಿ ನೀಡಿದ ಅವರು ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ತಯಾರಿಸುವ ಬಿಇಎಲ್ ಕಂಪನಿಯ ಎಂಜಿನಿಯರ್ ಯಾಸಿನ್ ಅಹ್ಮದ್ ನೇತೃತ್ವದ ಐದು ಸದಸ್ಯರ ತಂಡವು ಎಲೆಕ್ಟ್ರಾನಿಕ್ ಮತ ಯಂತ್ರಗಳ ಆರಂಭಿಕ ಪರೀಕ್ಷೆಯನ್ನು ನಡೆಸಿದರು. ತಪಾಸಣೆಯಲ್ಲಿ ಯಶಸ್ವೀಕಾರ್ಯನಿರ್ವಹಣೆಯ ಯಂತ್ರಗಳನ್ನು ವಿಧಾನಸಭಾ ಚುನಾವಣೆಗೆ ಬಳಸಲುತೀರ್ಮಾನಿಸಿದೆ.
ಜನವರಿ 3 ರಂದು ತಪಾಸಣಾ ಕಾರ್ಯ ಆರಂಭಗೊಮಡಿದ್ದು, ತಪಾಸಣೆಯ ಸಮಯದಲ್ಲಿ 560 ಸೆಟ್ ಯಂತ್ರಗಳನ್ನು ಪರಿಶೀಲಿಸಲಾಗಿದ್ದು, ತಪಾಸಣೆ ಮುಂದುವರಿಯುತ್ತಿದೆ. ಆರಂಭಿಕ ತಪಾಸಣೆಯ ಬಗ್ಗೆ ಇವಿಎಂ ನೋಡಲ್ ಅಧಿಕಾರಿ ಸುರೇಶ್ ಚಂದ್ರ ತೃಪ್ತಿ ವ್ಯಕ್ತಪಡಿಸಿದರು. ಚುನಾವಣಾ ಮತಯಂತ್ರ ತಪಾಸಣೆ ವೀಕ್ಷಿಸಲು ಆಗಮಿಸಿದ್ದ ವಿವಿಧ ರಾಜಕೀಯ ಪಕ್ಷಗಳ ನೇತಾರರಾದ ಸಿದ್ದಿಕ್ ಪಡ್ಪು, ಉಮ್ಮರ್ ಪಾಟಲಡ್ಕ, ಕೂಕ್ಕಲ್ ಬಾಲಕೃಷ್ಣನ್, ಮೊಹಮ್ಮದ್ ನೌಶಿದ್ ಅವರೊಂದಿಗೆ ಸುರೇಶ್‍ಚಂದ್ರ ಸಮಾಲೋಚನೆ ನಡೆಸಿದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇನ್ಬಾಶೇಖರ್, ಎಂಡೋಸಲ್ಫಾನ್ ವಿಶೇಷ ಸೆಲ್ ಸಹಾಐಕ ಜಿಲ್ಲಾಧಿಕಾರಿ ಲಿಪು ಎಸ್. ಲಾರೆನ್ಸ್, ಚುನಾವಣಾ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ ಎನ್ ಗೋಪ ಕುಮಾರ್, ಚುನಾವಣಾ ಇಲಾಖೆಯ ಕಿರಿಯ ಅಧೀಕ್ಷಕ ಎ ರಾಜೀವನ್ ಮತ್ತು ಇತರ ಚುನಾವಣಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


