ಕಾಸರಗೋಡು: ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ ವತಿಯಿಂದ 'ಶತಮಾನದ ಮೂಲಕ ಆದರ್ಶ ಪರಿಶುದ್ಧತೆ'ಎಂಬ ವಿಷಯದೊಂದಿಗೆ ಆಯೋಜಿಸಿರುವ 100ನೇ ವರ್ಷದ ಅಂತಾರಾಷ್ಟ್ರೀಯ ಸಮ್ಮೇಳನ ಫೆ.4ರಂದು ರಾಷ್ಟ್ರೀಯ ಹೆದ್ದಾರಿ ಚಟ್ಟಂಚಾಲ್ ಸನಿಹದ ಕುಣಿಯ ವರಕ್ಕಲ್ ಮುಳ್ಳಕೋಯ ತಂಗಳ್‍ನಗರದಲ್ಲಿ ನಡೆಯಲಿದೆ ಎಂದು ಸಮಸ್ತ ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಙಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
100ನೇ ವಾರ್ಷಿಕೋತ್ಸವದ ಸಮಾರೋಪ ಕಾರ್ಯಕ್ರಮಗಳಿಗಾಗಿ ಕುಣಿಯಾದಲ್ಲಿ ವಿಸ್ತೃತ ಸಿದ್ಧತೆ ನಡೆಸಲಾಗುತ್ತಿದ್ದು, 33,313 ಮಂದಿ ಪ್ರತಿನಿಧಿಗಳು ಭಾಗವಹಿಸುವವರೊಂದಿಗೆ ನಿಯೋಗ ಶಿಬಿರ, ಜಾಗತಿಕ ಪ್ರದರ್ಶನ, ಜಾಗತಿಕ ಉಲಮಾ ಸಮಾವೇಶ, ರಾಷ್ಟ್ರೀಯ ಶಿಕ್ಷಣ ಸಮಾವೇಶ ಮತ್ತು ಸಾರ್ವಜನಿಕ ಸಮ್ಮೇಳನದಂತಹ ವಿವಿಧ ಕಾರ್ಯಕ್ರಮಗಳಿಗಾಗಿ ಕುಣಿಯದ ಐದು ಕೇಂದ್ರಗಳಲ್ಲಿ ಐದು ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ. ಸಮ್ಮೇಳನದ ಅಂಗವಾಗಿ ನಡೆಯಲಿರುವ 'ಗ್ಲೋಬಲ್ ಎಕ್ಸ್‍ಪೆÇೀ'ವನ್ನು ಜ. 30 ರಂದು ಸಂಜೆ 4ಕ್ಕೆ ಕರ್ನಾಟಕ ಹಜ್ ಖಾತೆ ಸಚಿವ ರಹೀಮ್ ಖಾನ್ ಉದ್ಘಾಟಿಸುವರು. ಸಂದರ್ಶಕರಿಗೆ ಜ್ಞಾನ ಮತ್ತು ಕುತೂಹಲವನ್ನು ನೀಡುವ ಈ ಎಕ್ಸ್‍ಪೆÇೀ ಜನವರಿ 31ರಿಂದ ಚಟುವಟಿಕೆ ಆರಂಭಿಸಲಿದೆ. ಫೆಬ್ರವರಿ 1 ರಂದು ಮಹಿಳೆಯರಿಗೆ ಮತ್ತು 2 ರಿಂದ 8 ರವರೆಗೆ ಪುರುಷರಿಗೆ ಪ್ರವೇಶ ಮುಕ್ತವಾಗಿರಲಿದೆ.
ಫೆ. 4 ರಂದು ಮಧ್ಯಾಹ್ನ 2.30 ಕ್ಕೆ ತಳಂಗರೆಯಿಂದ ಕುಣಿಯದ ಸಮ್ಮೇಳನ ನಗರಕ್ಕೆ ಧ್ವಜಮೆರವಣಿಗೆ ನಡೆಯುವುದು. ನಂತರ ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಸಮಾವೇಶ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸುವರು. ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ತಙಳ್ ಸಭೆಯನ್ನುದ್ದೇಶಿಸಿ ಮಾತನಾಡುವರು.
ಸಂಜೆ 4ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಙಳ್ ಅಧ್ಯಕ್ಷತೆಯಲ್ಲಿ ಸಯ್ಯಿದ್ ಸಾದಿಕಲಿ ಶಿಹಾಬ್ ತಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಪಾಣಕ್ಕಾಡ್ ಸೈಯದ್ ಅಬ್ಬಾಸಲಿ ಶಿಹಾಬ್ ತಙಳ್ ಶತಮಾನೋತ್ಸವ ಸ್ಮಾರಕ ಗ್ರಂಥ ಬಿಡುಗಡೆ ಮಾಡುವರು.
ಫೆಬ್ರವರಿ 8 ರಂದು ಬೆಳಿಗ್ಗೆ 9 ಗಂಟೆಗೆ ಸೈಯದ್ ಮುಯಿನಾಲಿ ಶಿಹಾಬ್ ತಙಳ್ ಅವರ ಅಧ್ಯಕ್ಷತೆಯಲ್ಲಿ ಎ.ವಿ. ಅಬ್ದುರಹ್ಮಾನ್ ಮುಸ್ಲಿಯಾರ್ ಉದ್ಘಾಟಿಸುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಈಜಿಪ್ಟ್‍ನ ಅಲ್-ಅಝರ್ ವಿಶ್ವವಿದ್ಯಾಲಯದ ರೆಕ್ಟರ್ ಡಾ. ಸಲಾಮಾ ಜುಮಾ ದಾವೂದ್ ಉದ್ಘಾಟಿಸುವರು. ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಙಳ್ ಅಧ್ಯಕ್ಷತೆ ವಹಿಸುವರು. ಪಾಣಕ್ಕಾಡ್ ಸೈಯದ್ ಸ್ವಾದಿಖಲಿ ಶಿಹಾಬ್ ತಙಳ್ ಮುಖ್ಯ ಭಾಷಣ ಮಾಡುವರು. ಸಮಸ್ತದ ಪ್ರಧಾನ ಕಾರ್ಯದರ್ಶಿ ಪೆÇ್ರ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಶತಮಾನೋತ್ಸವ ಸಂದೇಶ ನೀಡಲಿದ್ದಾರೆ. ಈ ಸಂದರ್ಭ ಸಮಸ್ತ ಶತಮಾನೋತ್ಸವ ಪ್ರಶಸ್ತಿಯನ್ನು ಲುಲು ಇಂಟನ್ರ್ಯಾಷನಲ್ ಗ್ರೂಪ್ ಅಧ್ಯಕ್ಷ ಎಂ.ಎ. ಯೂಸುಫಾಲಿ ಅವರಿಗೆ ಪ್ರದಾನ ಮಾಡಲಾಗುವುದು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇರಳ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್, ಉಪನಾಯಕ ಪಿ.ಕೆ. ಕುಞËಲಿಕುಟ್ಟಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎನ್.ಎ. ಹ್ಯಾರಿಸ್ ಪಾಲ್ಗೊಳ್ಳುವರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ-ಸಾಂಸ್ಕøತಿಕ ಕ್ಷೇತ್ರದ ಪ್ರಮುಖ ವಿದ್ವಾಂಸರು, ಸಾರ್ವಜನಿಕ ಪ್ರತಿನಿಧಿಗಳು, ನಾಯಕರು, ವಿದೇಶಿ ಪ್ರತಿನಿಧಿಗಳು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಂಘದ ಉಪಾಧ್ಯಕ್ಷ ಸೈಯದ್ ಮುಹಮ್ಮದ್ ಕೋಯ ತಂಗಳ್ ಜಮಲುಲೈಲಿ, ಪಾಣಕ್ಕಾಡ್ ಸೈಯದ್ ಸಾಬಿಖಲಿ ಶಿಹಾಬ್ ತಙಳ್, ಸಮ್ಮೇಳನದ ಸಂಯೋಜಕ ಕೆ.ಮೋಯಿನ್‍ಕುಟ್ಟಿ, ಕಾಸರಗೋಡು ಜಿಲ್ಲಾ ಸ್ವಾಗತ ಸಂಘದ ಕೋಶಾಧಿಕಾರಿ ಕುಣಿಯ ಇಬ್ರಾಹಿಂ ಹಾಜಿ ಉಪಸ್ಥಿತರಿದ್ದರು.

