ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಡಂಬಾರು ಬೆಜ್ಜದ ದೈವಸ್ಥಾನವೊಂದರ ಸನಿಹ ಹಿತ್ತಿಲಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರಿಂದ ಜೂಜಿಗೆ ಬಳಸಿದ್ದರೆನ್ನಲದ 72860ರೂ. ನಗದು ಹಾಗೂ ಒಂದು ಅಂಕದ ಕೋಳಿಯನ್ನು ವಶಪಡಿಸಿಕೊಂಡಿದ್ದಾರೆ.
ಅಂಗಡಿಪದವುನಿವಾಸಿ ಚಂದ್ರಹಾಸ ರೈ,ಕಡಂಬಾರ್ ನಿವಾಸಿ ಬಾಲಕೃಷ್ಣ ಶೆಟ್ಟಿ ಹಾಗೂ ಮಜೀರ್‍ಪಳ್ಳ ನಿವಾಸಿ ರೋಹಿತ್ ರೈ ಬಂಧಿತರು. ಇವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಮಂಜೇಶ್ವರ ಠಾಣೆ ಇನ್ಸ್‍ಪೆಕ್ಟರ್‍ಪಿ. ಅಜಿತ್ ಕುಮಾರ್ ನಿರ್ದೇಶ ಪ್ರಕಾರ ಎಸ್.ಐ ಕೆ.ಆರ್ ಉಮೇಶ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಪೊಲೀಸರನ್ನು ಕಂಡು ಕೆಲವರು ಓಡಿ ಪರಾರಿಯಾಗಿದ್ದಾರೆ. ದೈವಸ್ಥಾನ ಹಾಗೂ ಇತರ ಧಾರ್ಮಿಕತೆ ಹೆಸರಲ್ಲಿ ಕೋಳಿ ಅಂಕ ವ್ಯಾಪಕವಾಗಿ ನಡೆಸುತ್ತಿದ್ದು, ಕೋಳಿ ಅಂಕ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

