ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ವರ್ಕಿಂಗ್ ಗ್ರೂಪ್‍ಗಳ ಸಭೆ ಗುರುವಾರ ಬದಿಯಡ್ಕ ಶ್ರೀ ಗುರು ಸದನದಲ್ಲಿ ಜರಗಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯಿತಿಯ ಅಭಿವೃದ್ಧಿಗಾಗಿ ವಿವಿಧ ವಲಯಗಳ ಮೂಲಕ ಅನುಷ್ಠಾನಗೊಳ್ಳಬೇಕಾದ ಯೋಜನೆಗಳನ್ನು ನಿರ್ಧರಿಸಬೇಕು. ಕೃಷಿ, ಹೈನುಗಾರಿಕೆ, ಅಭಿವೃದ್ಧಿ, ರಸ್ತೆಗಳು, ನೀರಿನ ಸೌಕರ್ಯದಿಂದ ಜನತೆ ವಂಚಿತರಾಗಬಾರದು. ಗ್ರಾಮಪಂಚಾಯಿತಿಯ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ ವಿವಿಧ ಯೋಜನೆಗಳ ರೂಪರೇಷೆಗಳನ್ನು ತಯಾರಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯರುಗಳಾದ ಮಹೇಶ್ ವಳಕ್ಕುಂಜ, ಖಾದರ್ ಮಾನ್ಯ, ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಹಮೀದ್ ಕೆಡೆಂಜಿ, ರಜನಿ ಜಿ.ಆರ್., ಅವಿನಾಶ್ ರೈ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಶ್ಯಾಮಪ್ರಸಾದ ಮಾನ್ಯ, ಗಂಗಾಧರ ಗೋಳಿಯಡ್ಕ ಮಾತನಾಡಿದರು. ವಿವಿಧ ವಾರ್ಡುಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಪಂಚಾಯಿತಿ ಸದಸ್ಯರು ನೇತೃತ್ವದಲ್ಲಿ ವರ್ಕಿಂಗ್ ಗ್ರೂಪ್‍ಗಳ ಸಭೆ ನಡೆಯಿತು.

.jpg)
