ಕುಂಬಳೆ: ಪುತ್ತಿಗೆ ಕಟ್ಟತ್ತಡ್ಕದ ಮುಹಿಮ್ಮಾತ್ ಸ್ಥಾಪಕ ಸಯ್ಯದ್ ತ್ವಾಹಿರುಲ್ ಅಹ್ದಲ್ ತಙಳ್ ಅವರ 20ನೇ ಉರುಸ್ ಮುಬಾರಕ್ ಮತ್ತು ಪದವಿಪ್ರದಾನ ಸಮ್ಮೇಳನ ಜನವರಿ 31ರಂದು ಸಂಜೆ ನಡೆಯಲಿರುವುದು. ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ. ಪಿ. ಅಬೂಬಕರ್ ಮುಸ್ಲಿಯಾರ್ ಮತ್ತು ಇತರ ಗಣ್ಯರು ಪಾಲ್ಗೊಳ್ಳುವರು.
ಉರುಸ್ ಅಂಗವಾಗಿ ಝಿಯಾರತ್, ಘೋಷಣಾ ರ್ಯಾಲಿ, ಕುರಾನ್ ದೌರಾ, ತಮಿಳು ಪ್ರತಿನಿಧಿ ಸಭೆ, ಸ್ವಲಾತ್ ಮಜ್ಲಿಸ್, ಧಾರ್ಮಿಕ ಪ್ರವಚನ, ರಾತೀಬ್-ಮೌಲಿದ್ ಮಜ್ಲಿಸ್, ಸಾಂಸ್ಕøತಿಕ ಸಮ್ಮೇಳನ ಮತ್ತು ಸ್ಮರಣಾರ್ಥ ಸಭೆ ಆಯೋಜಿಸಲಾಗಿತ್ತು.

