ಬೆಂಗಳೂರು: ವೇಗವಾಗಿ ಬದಲಾಗುತ್ತಿರುವ ಭದ್ರತಾ ವ್ಯವಸ್ಥೆಯಲ್ಲಿ ಭಾರತೀಯ ವಾಯಪಡೆಯನ್ನು ಸನ್ನದ್ಧವಾಗಿರಿಸಲು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಅಗತ್ಯಗಳನ್ನು ಸಕಾಲದಲ್ಲಿ ಪೂರೈಸಬೇಕು ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್ ಹೇಳಿದರು.
ಎಡಿಎ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ 'ಏರೋನಾಟಿಕ್ಸ್ 2047' ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೇಜಸ್ ಲಘು ಯುದ್ಧವಿಮಾನ ಹಾರಾಟ ಆರಂಭಿಸಿ 25 ವರ್ಷ ಪೂರ್ಣಗೊಳಿಸಿರುವುದಕ್ಕೆ ಎ.ಪಿ. ಸಿಂಗ್ ಅವರು ಎಡಿಎ ಅನ್ನು ಅಭಿನಂದಿಸಿದರು. ಸೇನಾ ಸಲಕರಣೆಗಳ ಸಕಾಲಿಕ ಪೂರೈಕೆಯ ಅಗತ್ಯದ ಬಗ್ಗೆ ಒತ್ತಿ ಹೇಳಿದರು.
2047ರ ವೇಳೆಗೆ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಮತ್ತು ವಿಕಸಿತ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ದೇಶಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮುಖ್ಯಸ್ಥ ಸಮಿರ್ ವಿ. ಕಾಮತ್ ಹೇಳಿದರು.

