ಕುಂಬಳೆ: ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ ಇಲಾಖೆ, ಕುಟುಂಬಶ್ರೀ ಮಿಷನ್, ಲೀಗಲ್ ಸರ್ವೀಸ್ ಅಥೋರಿಟಿ ಎಂಬಿವುಗಳ ಸಹಕಾರದೊಂದಿಗೆ ಮಾದಕ ಪದಾರ್ಥ ವಿರುದ್ಧ ತಿಳುವಳಿಕೆ, ಎನ್‍ಡಿಪಿಎಸ್ ಕಾನೂನುಗಳ ಬಗ್ಗೆ ತಿಳುವಳಿಕೆ ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೇರಳ ಸರಕಾರದ 5ನೇ ಹಂತದ ‘ನೋ ಟು ಡ್ರಗ್ಸ್’ ಕಾರ್ಯಾಗಾರದಂಗವಾಗಿ ಮಾದಕ ಪದಾರ್ಥ ವಿರುದ್ಧ ಪ್ರಚಾರಕ್ಕೆ ಸಂಬಂಧಿಸಿ ರಾಜ್ಯದ 140 ವಿಧಾನಸಭಾ ಮಂಡಲಗಳಲ್ಲೂ ಶಾಸಕರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಂತೆ ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಉದ್ಘಾಟಿಸಿದರು.
ವಿಮುಕ್ತಿ ಮೆನೇಜರ್ ಅಸಿಸ್ಟೆಂಟ್ ಎಕ್ಸೈಸ್ ಕಮಿಷನರ್ ಅನ್ವರ್ ಸಾದತ್ ಪಿ. ಸ್ವಾಗತಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್ ಅಧ್ಯಕ್ಷತೆ ವಹಿಸಿದರು. ಪಂ. ಸದಸ್ಯೆ ರಿಸ್ವಾನ ನೌಶಾದ್, ಎಇಒ ಶಶಿಧರ, ಪಂ. ಕಾರ್ಯದರ್ಶಿ ಶೈಜು ಕೆ, ಪ್ರಾಂಶುಪಾಲೆ ಸಿಂಧು, ರೆವರೆಂಡ್ ಫಾ| ಮೆಲ್ವಿನ್ ಡಿಸೋಜ, ಹೆಲ್ತ್ ಸೂಪರ್‍ವೈಸರ್ ಮಧುಸೂದನನ್, ಬಾಬು ಶರತ್‍ಲಾಲ್, ಖದೀಜ ಪಿ.ಕೆ. ಶುಭ ಕೋರಿದರು. ನ್ಯಾಯವಾದಿ ಮುನವ್ವರ್ ತಬ್ಶೀರ್, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‍ಪೆಕ್ಟರ್ ಪೀತಾಂಭರನ್ ಕೆ. ತರಗತಿ ನಡೆಸಿದರು. ಸ್ನೇಹ ಕೆ.ಎಂ. ಪ್ರತಿಜ್ಞೆ ಬೋಧಿಸಿದರು. ಎಕ್ಸೈಸ್ ಇನ್ಸ್‍ಪೆಕ್ಟರ್ ಶಹಬಾಸ್ ಅಹಮ್ಮದ್ ವಂದಿಸಿದರು.

