ಕಾಸರಗೋಡು: ಜೆಸಿಐ ಕಾಸರಗೋಡು ಸಂಸ್ಥೆಯ ಸುವರ್ಣ ಜ್ಯುಬಿಲಿ ವಾರ್ಷಿಕೋತ್ಸವದ ಅಂಗವಾಗಿ, ಯುವತಲೆಮಾರಿನಲ್ಲಿ ಜೆಸಿಐಯ ಮೌಲ್ಯಗಳು ಮತ್ತು ದೃಷ್ಟಿಕೋನಗಳನ್ನು ಇನ್ನಷ್ಟು ಆಳವಾಗಿ ತಲುಪಿಸುವ ಉದ್ದೇಶದಿಂದ 'ಜೆಸಿಐ ಕ್ರೀಡ್ ವ್ಯಾಖ್ಯಾನ ಸ್ಪರ್ಧೆ' ಆಯೋಜಿಸಲಾಗುತ್ತಿದೆ. ಜೆಸಿಐ ಇಂಡಿಯಾ ಝೋನ್ 19 ವ್ಯಾಪ್ತಿಗೆ ಒಳಪಡುವ ಕಾಸರಗೋಡು, ಕಣ್ಣೂರು ಮತ್ತು ವಯನಾಡು ಜಿಲ್ಲೆಗಳ 15 ರಿಂದ 40 ವರ್ಷ ವಯಸ್ಸಿನ ಯುವಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಜೆಸಿಐ ಕಾಸರಗೋಡು ಪದಾಧಿಕಾರಿಗಳಾದ ನಿಸಾರ್ ತಾಯಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೆಸಿಐ ಕ್ರೀಡ್‍ನ ಆಂತರಾರ್ಥ, ಅದರ ಜೀವನಾತ್ಮಕ ಪ್ರಾಸಂಗಿಕತೆ ಮತ್ತು ಮಹತ್ವವನ್ನು ವಿವರಿಸುವ ಲೇಖನಗಳನ್ನು 2026 ಫೆಬ್ರವರಿ 25ರªರೆಗೆ ಸಲ್ಲಿಸಲ್ಲಿಸಬಹುದಾಗಿದೆ. ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸುವವರಿಗೆ ಪ್ರತಿ ಜಿಲ್ಲೆಗೆ ಕ್ರಮವಾಗಿ ರೂ. 10,000 ಮತ್ತು ರೂ. 5,000 ನಗದು ಬಹುಮಾನಗಳ ಜೊತೆಗೆ ಇತರ ಪೆÇ್ರೀತ್ಸಾಹಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಲೇಖನಗಳನ್ನು ಇಮೈಲ್ ವಿಳಾಸ jcicreedkasaragod@gmail.com ಅಥವ ವಾಟ್ಸಪ್(9895353279)ಗೆ ಕಳುಹಿಸಿಕೊಡಬಹುದು ಎಂದುತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಯತೀಶ್ ಬಳ್ಳಾಲ್, ಸಿ.ಕೆ. ಅಜಿತ್ ಕುಮಾರ್, ಕೆ. ನಾಗೇಶ್, ಅರುಣ್ ಮತ್ತು ಜಿ.ವಿ. ಮಿಥುನ್ ಉಪಸ್ಥಿತರಿದ್ದರು.

